ಬೊಗಳೆ ರಗಳೆ

header ads

(ಮನ) ಬಿಚ್ಚಿ ನುಡಿದಳಾ ನಟೀಮಣಿ

(ಬೊಗಳೂರು ವಸ್ತ್ರ ಶೋಧ ಬ್ಯುರೋದಿಂದ)
ಬೊಗಳೂರು, ನ.10- ಇತ್ತೀಚೆಗೆ ನಟೀ ಮಣಿಯರು ಮಹಾಭಾರತದಿಂದ ಪ್ರೇರಣೆ ಪಡೆದವರಂತೆ ಕಾಣಿಸುತ್ತಿದೆ ಎಂಬ ಕುರಿತು ಆರೋಪವೊಂದು ಕೇಳಿಬಂದಿದ್ದೇ ತಡ, ಅಲ್ಲಿಗೆ ಮುಖಮರೆಸಿಕೊಂಡು ತೆರಳಿದ ಬೊಗಳೆ ರಗಳೆ ಬ್ಯುರೋದ ಮುಖಕ್ಕೆ ತುಂಡು ವಸ್ತ್ರವೊಂದು ರಪ್ಪನೆ ರಾಚಿತು. ಆಗ ನೆನಪಿಗೆ ಬಂದದ್ದು ಮಿಗ್ ವಿಮಾನ ಪತನ.

ಚೇತರಿಸಿಕೊಂಡು ಏನೆಂದು ನೋಡಿದಾಗ ನಿಜ ವಿಷಯ ತಿಳಿದು ಬಂತು. ಅಲ್ಲಿ ಅತ್ಯಾಧುನಿಕ ಬಟ್ಟೆಗಳನ್ನು ಎಷ್ಟೇ ಗುಡ್ಡೆ ಹಾಕಿದರೂ ಅದು ಒಂದು ಮೀಟರಿಗಿಂತ ಹೆಚ್ಚು ಎತ್ತರಕ್ಕೆ ಏರುವುದೇ ಇಲ್ಲ! ಈ ಕುತೂಹಲ ಭರಿತ, ದಾಖಲೆಗೆ ಅರ್ಹವಾದ ಮತ್ತು ಪವಾಡಸದೃಶ ಸಂಗತಿಗೆ ಕಾರಣವೇನು ಎಂದು ಶೋಧಿಸಿದಾಗ.....

ಏನೂಂತ ಹೇಳಲಿ....? ಅಲ್ಲೇನೂ ಇರಲೇ ಇಲ್ಲ! ಅಂದರೆ ಅಲ್ಲಿ ಇದ್ದುದು ಒಂದಿಂಚಿಗಿಂತ ಕಡಿಮೆ ಅಳತೆಯ ಬಟ್ಟೆಗಳೇ....! ಎಷ್ಟೇ ಗುಡ್ಡೆ ಹಾಕಿದರೂ ಒಂದು ಬಕೆಟ್ ತುಂಬಲು ಹಲವಾರು ವರ್ಷಗಳೇ ಬೇಕಾಗುವ ಈ ಪ್ರಕರಣ, ದಾಖಲೆಯೇನೂ ಅಲ್ಲ ಎಂದು ತಿಳಿದುಬಂತು.

ಆದರೂ ಈ ರಾಶಿ ಯಾಕೆ ಹಾಕಿದ್ದಾರೆ, ಇಲ್ಲೇನಾದರೂ ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಶೂಟಿಂಗ್ ನಡೆಯುತ್ತಿದೆಯೇ ಎಂಬ ಅನುಮಾನ ಬಂತು.ಮತ್ತೂ ಮುಂದುವರಿದು ಈ ತುಂಡು ಬಟ್ಟೆಗಳು ಎಲ್ಲಿಂದ ಬರುತ್ತಿವೆ ಎಂದು ನೋಡಿದಾಗ... ನಟೀ ಮಣಿ ಜಾನೆಟ್ ಜಾಕ್ಸನ್‌ ಸಾಕೀ ವಸ್ತ್ರದ ಸಹವಾಸ ಅಂದುಕೊಂಡು ಈ ಬಟ್ಟೆ ಎಸೆಯುತ್ತಿದ್ದು, ಆಕೆ ಎಸೆಯುತ್ತಿದ್ದ ಥೂಂಡು ಬಟ್ಟೆಯೇ ಕಣ್ಣಿಗೆ ಬಡಿದು ಪ್ರಜ್ಞೆ ತಪ್ಪಿ ಬೀಳುವುದರಲ್ಲಿತ್ತು ಬ್ಯುರೋ!

ಇದರ ಹಿಂದಿರುವ ಕಾರಣಗಳೇನು ಎಂದು ಶೋಧಿಸಿದಾಗ ಇಲ್ಲಿ ಪ್ರಕಟವಾಗಿದ್ದ ವರದಿಯೊಂದು ಕುತೂಹಲ ಕೆರಳಿಸಿತು. ಏನೆಂದರೆ 80 ವರ್ಷ ಆಗುವವರೆಗೂ ಬಿಚ್ಚುವುದನ್ನು ನಿಲ್ಲಿಸುವುದಿಲ್ಲ ಎಂದು ಈ ಬಿಚ್ ಶಿರೋಮಣಿ ಖ್ಯಾತಿಯ ಜಾಕೆಟ್ ಜಾನ್ಸನ್ ಘೋಷಿಸಿದ್ದಳು.

ಹಾಗಾಗಿ ಸಂದರ್ಶನ ಮಾಡಬೇಕಾದ ಅನಿವಾರ್ಯತೆ ಎದುರಾಗಲಿಲ್ಲ. ಯಾಕೆಂದರೆ ಆಕೆಯ ಅಭಿಮಾನಿಗಳಿಗೆ ಅಷ್ಟೇ ಸಾಕು. ಅವಳ ಕುರಿತು ಏನೇ ಸುದ್ದಿ ಪ್ರಕಟವಾದರೂ ಅದನ್ನು ಜತನದಿಂದ ಕಾಪಾಡಲೆಂದೇ ಒಂದು ವೆಬ್ ತಾಣವನ್ನೂ ತೆರೆಯಲಾಗಿದೆ.

ಒಟ್ಟಿನಲ್ಲಿ ಇನ್ನು ಎಂಬತ್ತು ವರ್ಷಗಳೇ ಕಳೆದರು ಕೂಡ ಈ ಬಿಚ್ಚೋಲೆ ನಟಿ ಬಿಚ್ಚಿ ಹಾಕುವ ವಸ್ತ್ರದ ಒಟ್ಟು ರಾಶಿಯು ಎರಡು ಬಕೆಟ್ ದಾಟಲಾರದು ಎಂದು ಅಂದಾಜಿಸಲಾಗಿದೆ.

+++++++++++++++++
ಇದು ಬಿಟ್ಟಿ ಜಾಹೀರಾತು
+++++++++++++++++
ಬರಲಿದೆ ಪ್ರಯಾಸ ಕಥನ!!!
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!ಎಂದೂ ಕಂಡು
ಕೇಳರಿಯದ ಪ್ರಯಾಸ ಕಥನ ಶೀಘ್ರವೇ ಸಚಿತ್ರವಾಗಿ ಮೂಡಿಬರಲಿದೆ.
ನಿರೀಕ್ಷಿಸಬೇಡಿ...
ಯಾಕೆಂದರೆ ಆಸೆಯೇ ದುಃಖಕ್ಕೆ ಮೂಲ...
ನಿರೀಕ್ಷಿಸಿದರೆ ಅನಿರೀಕ್ಷಿತವಾಗಿರುವುದೇ ಘಟಿಸೀತು...!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಇದೇನಿದು ಒಂದೇ ದಿನದಲ್ಲಿ, ಒಂದೇ ವಸ್ತುವಿನ ಮೇಲೆ, ಒಂದೇ ಸುದ್ದಿಯಿರುವ, ಎರಡು ಸೂತ್ರಗಳು. ವೈರಸ್ ಬಂದಿದೆಯಾ?

  ಈ ಮಹಾಭಾರತದಲ್ಲಿ ಶ್ರೀ ಕೃಷ್ಣ ಏನು ಮಾಡುತ್ತಿದ್ದಾನೆ. ಈ ನಾರೀ ಮಣಿಯರಿಗೆ ಬುದ್ಧಿ ಹೇಳೋದು ಬೇಡ್ವಾ?

  ಶಾಂತಮ್ಮ ಪಾಪಮ್ಮ. ನಾನು ಕಿವಿ ಮುಚ್ಚಿಕೊಳ್ಳುವೆ

  ಪ್ರತ್ಯುತ್ತರಅಳಿಸಿ
 2. ಮಾವಿನ ಸರಸರೇ

  ಗಟ್ಟಿಯಾಗಿ ಕಿವಿ ಮುಚ್ಚಿಕೊಂಡು ದಯವಿಟ್ಟು ಕಣ್ಣು ಬಿಡುತ್ತಿರಿ...
  ಇಲ್ಲವಾದಲ್ಲಿ ಅಪಘಾತವಾದೀತು, ಅನಾಹುತವಾದೀತು !

  ಒಂದು ವೈರಸ್ಸನ್ನು ಡಿಲೀಟ್ ಮಾಡಿದ್ದೇವೆ. ಮಂಡೆಯನ್ನು ಸಿಕ್ಕಾಪಟ್ಟೆ ಕೊರೀತಾ ಇತ್ತು.

  ಪ್ರತ್ಯುತ್ತರಅಳಿಸಿ
 3. ಪಬ್ಬಿಗರೇ
  ನಾವು ಕುಡಿಯೋದು xxxರಸ ಮಾತ್ರ.

  ಹಾಗಾಗಿ AAAಚ್ಚರಿಕೆಯನ್ನು ವಾಪಸ್ ತೆಗೆದುಕೊಳ್ಳಿ!

  ಪ್ರತ್ಯುತ್ತರಅಳಿಸಿ
 4. ನಿಮಗೊಂದು ಗುಟ್ಟು ಹೇಳ್ಲಾ. ಖ್ಯಾತ ಬಿಚ್ಚಿಂಗು ತಜ್ಞೆ ಮಲ್ಲಿಕಾ 'ಶೇರ್‍'ಆವತ್ತೊಮ್ಮೆ ಕೊಟ್ಟ ಆಕೆಯ ಬಟ್ಟೆ ಬೆಂಕಿ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದೀನಿ. ನಿಂಗೆ ಬೇಕಾದರೆ ಕೊಡಬಹುದು!

  ಪ್ರತ್ಯುತ್ತರಅಳಿಸಿ
 5. ಓಹ್ ವೇಣು ಅವರೆ,

  ಮಲ್ಲಿಕಾಳ ಬಟ್ಟೆ ಬಿಚ್ಚಿ ಬೆಂಕಿ ಪೆಟ್ಟಿಗೆಯೊಳಗಿಟ್ಟಿದ್ದೀರಾ? ಅಷ್ಟು ದೊಡ್ಡದಿತ್ತೇ ಬಟ್ಟೆ? ಅಥವಾ ಬೆಂಕಿ ಪೆಟ್ಟಿಗೆಯೊಳಗೆ ಎಷ್ಟು ಜೋಡಿ ಬಟ್ಟೆ ತುಂಬಿಸಿದಿರಿ? ನಂಗಂತೂ ಒಂದು ಜೋಡಿ ಅಂದರೆ ನಂಬೋಕೇ ಆಗ್ತಾ ಇಲ್ಲವಲ್ಲಾ...?!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D