(ಬೊಗಳೂರು high-ಕೆಟ್ ಬ್ಯುರೋದಿಂದ)
ಬೊಗಳೂರು, ಅ.17- ಇದು ಅವಸರದ ಯುಗ. ಇದನ್ನು ತೀರಾ ಇತ್ತೀಚಿನ ಭಾಷೆಯಲ್ಲಿ ಹೈ-ಕೆಟ್ ಯುಗ ಅಂತಾನೂ ಕರೀಬೌದು. ಅಥವಾ high ನೆಟ್ ಯುಗ ಎಂದೇ ಹೇಳಬಹುದು. ಯಾಕೆಂದರೆ ಎಲ್ಲವೂ ಇಂಟರ್ನೆಟ್ಟಿನಲ್ಲೇ ಆಗಿಬಿಡುತ್ತವೆ.
ಬರೇ ಇಂಟರ್ನೆಟ್‌ನಲ್ಲಿ ಮಾತ್ರ ಎಂದು ತಿಳಿದುಕೊಂಡುಬಿಟ್ಟರೆ ಅದು ಕೂಡ ಅನ್ಅರ್ಥವೇ ಆಗಬಹುದಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ವಾದಿಸಿದ್ದಕ್ಕೆ ಪುಷ್ಟಿ ನೀಡಲು ಮಾಹಿತಿ ಸಂಗ್ರಹಣೆಗೆ ಮೇಲಕ್ಕೆ ನೆಗೆದುಬಿದ್ದಾಗ ಈ ಸುದ್ದಿ ಸಿಕ್ಕಿದೆ.
ಇದು Love at first flight ಆಗಿರುವುದರಿಂದ ಮತ್ತು ಮದುವೆ ನಡೆದ ಪ್ರದೇಶವು ಭೂಮಿಯಿಂದ 30 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದರೂ ಇದು ಸ್ವರ್ಗಕ್ಕೆ ಮೂರೇ ಗೇಣು ದೂರದಲ್ಲಿರುವುದರಿಂದ ಭಾರಿ ಸಂಖ್ಯೆಯಲ್ಲಿ ಈ ಮದುವೆಯೂಟಕ್ಕೆ ಹಾಜರಾಗಲು ಹೊರಟಿದ್ದರು.
ಇದೇ ಕಾರಣಕ್ಕೆ ಸ್ವರ್ಗದಲ್ಲಿ ನಡೆಯುವ ಮದುವೆ ನೋಡಲು ಅಲ್ಲಿಗೆ ವಿಶೇಷ ವಿಮಾನಗಳ ಸೌಲಭ್ಯಗಳನ್ನು ಏರ್ಪಾಡು ಮಾಡಲಾಗಿತ್ತು. ಇದರಿಂದ ಆಕಾಶದಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಕೆಲವರು ಆ ಜಾಮನ್ನೇ ಬ್ರೆಡ್‌ಗೆ ಸವರಿಕೊಂಡು ಬಾಯಿ ಚಪ್ಪರಿಸಿ ಮರಳಿದರೆ, ಮತ್ತೆ ಕೆಲವರು ಊಟಕ್ಕೆ ಹೋಗಲಾರದೆ, ಸ್ವರ್ಗವನ್ನೂ ನೋಡಲಾರದ ಚಿಂತೆಯಲ್ಲಿ ವಾಪಸಾಗಿದ್ದರು.
ಮತ್ತೆ ಕೆಲವರು ವಿಮಾನದಲ್ಲೇ ಬಫೆ ಸಿಸ್ಟಮ್ ಇದ್ದುದರಿಂದ ಊಟ ಮಾಡಿ ಕೈತೊಳೆದಾಗ ಭೂಮಿಯಲ್ಲಿದ್ದವರ ಮೇಲೆ ಮಳೆ ಬಂದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.
ಬೊಗಳೆ ರಗಳೆ ಬ್ಯುರೋ ತನಿಖೆ
ಆದರೆ, ಈ ಮದುವೆ ನಡೆಯುವುದಕ್ಕೆ ಮುನ್ನವೇ ಆಕಾಶದಲ್ಲಿ ಮತ್ತೊಂದು ಜೀವಿಯ ಉದಯವಾಗಿತ್ತು. ಮಕ್ಕಳಿಗೆ ವಿಮಾನ ಎಂದರೆ ಪಂಚ ಪ್ರಾಣ. ಅದರಲ್ಲೇ ಆಟ ಆಡುತ್ತಾ ಅವು ತಮ್ಮ ಇರುವಿಕೆಯನ್ನೇ ಮರೆಯುತ್ತವೆ.
ಆದರೆ ಆಧುನಿಕ ಅಂದರೆ ಹೈ-ಕೆಟ್ ಕಾಲದ ಮಕ್ಕಳು ಯಾವತ್ತೂ ಎಲ್ಲದರಲ್ಲೂ ಮುಂದಿರುತ್ತಾರೆ. ಅದೇ ರೀತಿ ಹುಟ್ಟುವುದರಲ್ಲೂ. ಮಗುವೊಂದು ಆಕಾಶದಲ್ಲೇ ಜನಿಸಿ ಆಕಾಶ್ ಎಂದು ಹೆಸರಿರಿಸಿಕೊಳ್ಳಲು ಪೂರ್ವನಿರ್ಧಾರ ಮಾಡಿಯೇ ಧರೆಗಿಳಿದಿದೆ.
ಆದರೆ ವಿಮಾನದಲ್ಲೇ ಹುಟ್ಟುವುದಕ್ಕೆ ಪ್ರಮುಖ ಕಾರಣವೆಂದರೆ ಆ ಮಗುವಿಗೆ ವಿಮಾನದ ಜೊತೆ ಆಟವಾಡಲು ತಡೆಯಲಾರದಷ್ಟು ಇಚ್ಛೆ ಆಗಿತ್ತೇ ಎಂಬುದರ ಬಗ್ಗೆ ಬ್ಯುರೋದಿಂದ ತನಿಖೆ ನಡೆಯುತ್ತಿದೆ.
ಕಿಡ್ಡು ಬಿಡ್ಡು
ಈ ಮಧ್ಯೆ, ಹೈ-ಕೆಟ್ ಯುಗಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ತಾನು ದೊಡ್ಡವನಾದ ಬಳಿಕ ಆಡಲಿಕ್ಕಾಗಿ 3 ವರ್ಷದ ಪ್ರಾಯದಲ್ಲೇ e-Bayಗೆ ಬ್ಯಾ ಬ್ಯಾ ಎನ್ನುತ್ತಾ ಮೌಸ್ ಮೂತಿ ಕ್ಲಿಕ್ ಮಾಡಿ ಒಂದು ಕಾರು ಖರೀದಿಸಿಬಿಟ್ಟಿದೆ. ಆ ಮಗುವಿಗೆ ಅಷ್ಟೊಂದು ಬ್ಯುಸಿ ದೈನಂದಿನ ಚಟುವಟಿಕೆಗಳ ಮಧ್ಯೆಯೂ ಇದಕ್ಕೆ ಸಮಯ ಸಿಕ್ಕಿಬಿಟ್ಟಿದ್ದು ವಿಶೇಷ!
ಮಗುವಿಗೆ ಎಂಥಾ ಅವಸರ! ಈ kid ಹಾಕಿದ bid ನಿಂದಾಗಿ ಮಾರಾಟಗಾರರು ಎದ್‌ಬಿದ್ ಬೆಚ್ಚಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ನಮ್ಮ ಬ್ಯುರೋದಿಂದ ವರದಿಯಾಗಿದೆ.
ಅಂತೂ ಕೊನೆಗೂ ನಿಮ್ಮ ಟ್ರೇಡ್‌ಮಾರ್ಕ್ ಲಾಂಛನ ಹಾಕಿದ್ದೀರಿ. ಅದಿಲ್ಲದೆ ವ್ಯಾಪಾರ ಡಲ್ಲಾಗಿತ್ತೇನೋ ಅನ್ವೇಷಿಗಳೇ?
ReplyDeleteಇಂದಿನ ನಿಮ್ಮ ಸುದ್ದಿಯನ್ನು ಓದಿ ನನಗೆ ಮೂಲಭೂತ ಪ್ರಶ್ನೆ ಉದ್ಭವವಾಗಿದೆ. ಲವ್ ಅಂದ್ರೆ ಏನು? ಮಕ್ಕಳನ್ನು ನಾವು ಪ್ರೀತಿಸ್ತೀವಲ್ಲ ಅದಾ?
ReplyDeleteಆಕಾಶದಲ್ಲಿ ಇಷ್ಟೆಲಲ್ ನಡಿತಿದೆ. ಮುಂದೆ, ಭೂಮಿಯನ್ನು ಬಿಟ್ಟು, ಅಂತರಿಕ್ಷದಲ್ಲಿ ನಡೆಯುವುವ ಸಾದ್ಯತೆಗಳು ಇವೇ.
ReplyDeleteನಮ್ಮ ಭೂತ ಜಗತ್ತಿನಲ್ಲಿ, ಒಬ್ಬರ ಕಣ್ಣಿಗೆ ಒಬ್ಬರು ಬೀಳದಿದ್ದ ಕಾರಣ, "ಮೊದಲ್ನೆ ನೋಟದ್ ಪ್ರೇಮ" ಆಗಿಲಿಕಿಲ್ಲ.
ಭೂತ
ವೇಣು ವಿನೋದರೆ,
ReplyDeleteಇದೇ ಲಾಂಛನ ಎಷ್ಟು ಸಾರಿ ಎಳೆದಾಡದಿದ್ರೂ ಮೇಲೆ ಕೂರಲು ಕೇಳುತ್ತಿರಲಿಲ್ಲ ಎಂಬುದು ನಿಮಗೆ ಗೊತ್ತಿತ್ತೇ? ಅಂತೂ ತಂದು ಕಟ್ಟಿ ಹಾಕಿದ್ದೇವೆ. ಆರಾಮವಾಗಿ ಅರಚಾಡುತ್ತಾ ಇದೆ.
ವೆಂಕಟೇಶರೆ,
ReplyDeleteನಿಮ್ಮ ಮೂಲದ ಭೂತದ ಪ್ರಶ್ನೆಯನ್ನು ಸುಂದರ ಪ್ರೇಮ ಕವಿತೆ ಹೆಣೆಯುವ ಭೂತಕ್ಕೇ ಕೇಳಿದರೆ, ತಲೆ ಸಾವಿರ ಹೋಳಾಗುವ ಮೊದಲು ಉತ್ತರ ದೊರೆತೀತು.
ಆದ್ರೂ ಲವ್ ಎನ್ನೋದು.... ನೆನಪಿಸಿಕೊಂಡ್ರೆ ಭಯವಾಗುತ್ತೆ!
ಭವಿಷ್ಯಕ್ಕಿಂತಲೂ ಭೂತಕಾಲದ ಬಗ್ಗೆಯೇ ಯೋಚಿಸೋ ಭೂತರಮೆಯೇ,
ReplyDeleteಪ್ರಥಮ... ಏನೋಂ.... ದಂತ ಭಗ್ನಂ.... ಅಂತ ಕೇಳಿದ್ದೀರಲ್ಲ... ಹಾಗಾಗಿಲ್ಲವಷ್ಟೆ.
Post a Comment
ಏನಾದ್ರೂ ಹೇಳ್ರಪಾ :-D