ಬೊಗಳೆ ರಗಳೆ

header ads

ಸ್ತ್ರೀದೌರ್ಜನ್ಯ ಕಾಯಿದೆ: ಪುರುಷಮಣಿಗಳ ಸ್ವಾಗತ!

(ಬೊಗಳೂರು ಕಾಯಿದೆ ಉಲ್ಟಾ ಬ್ಯುರೋದಿಂದ)
ಬೊಗಳೂರು, ಅ.26- ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿರುವ ಪುರುಷ ಪ್ರಾಣಿಗಳಿಗೆ ಜೀವಿಸಲು ವಿನೂತನ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಹೊಸ ಕಾಯಿದೆಯು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ತಮ್ಮ ತಮ್ಮ ಸ್ವಂತ ಪತ್ನಿಯರನ್ನು ಹೊಡೆಯಬಲ್ಲ, ಬಡಿಯಬಲ್ಲ, ಇತರ ಸ್ತ್ರೀ ಜೀವಿಗಳನ್ನು ಹಿಂಸಿಸಬಲ್ಲವರಿಗೆ ಸ್ವಂತ ಗೃಹದಷ್ಟೇ ಸಕಲ ಸೌಲಭ್ಯಗಳುಳ್ಳ ಕಾರಾ-ಗೃಹ ವಾಸಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪುರುಷ ಗಡಣ ಸಂತೃಪ್ತವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಜೈಲಿನಿಂದ ಹೊರಗಿದ್ದರೆ ಒಂದು ಕಿಲೋ ಟೊಮೆಟೋ ಪಡೆಯಬೇಕಿದ್ದರೆ ಒಂದು ಗ್ರಾಂ ಚಿನ್ನ ಅಡವಿಡಬೇಕಾದ ಪರಿಸ್ಥಿತಿ. ಆದರೆ ಜೈಲಿಗೆ ಹೋದರೆ ಉಚಿತ ಅಶನ, ವಸನ ಇತ್ಯಾದಿಗಳು ದೊರೆಯುತ್ತದೆ ಎಂಬ ಅಮೂಲ್ಯ ಸೂತ್ರವನ್ನು ಅಳವಡಿಸಲಾಗಿರುವುದು ಸರ್ವರ ಹರುಷಕ್ಕೆ ಕಾರಣವಾಗಿದೆ.

ಮಹಿಳಾ ಹಕ್ಕಿಗಳ ಸಂಘ ಹೋರಾಟದ ಕಣಕ್ಕೆ

ಸಾಮರ್ಥ್ಯ ಹೊಂದಿರುವ ಪುರುಷರಿಗೆ ಮಾತ್ರ ಈ ಅವಕಾಶ ಮಾಡಿಕೊಟ್ಟಿರುವ ಕ್ರಮಕ್ಕೆ ಮಹಿಳಾಮಣಿಗಳಿಂದ ಆಕ್ಷೇಪ ಬರುತ್ತಿದ್ದು, ತಮಗೂ ಈ ಅವಕಾಶ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳೆಲ್ಲಾ ಹೋರಾಟಕ್ಕೆ ಬೀದಿಗಿಳಿಯಲು ತೀರ್ಮಾನಿಸಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ತಾವು ಕೂಡ ಪುರುಷರಷ್ಟೇ ಸಮಾನರು, ತಮಗೂ ಅವರನ್ನು ಹಿಂಸಿಸುವ ತಾಕತ್ತು ಇದೆ. ನಮಗೂ ಇಂಥ ಕಾಯಿದೆ ಅನ್ವಯಿಸಬೇಕು ಎಂದು ಅಖಿಲ ಭಾರತ ಮಹಿಳಾ ಹಕ್ಕಿಗಳ ರಕ್ಷಣಾ ಸಮಿತಿ ಆಗ್ರಹಿಸಿದೆ.

ಉಲ್ಟಾ ಹೊಡೆದ ಕಾಯಿದೆ

ಪ್ರೀತಿ, ಆತ್ಮೀಯತೆ, ಸಾಂತ್ವನ ಎಂಬಿತ್ಯಾದಿ ಗುಣಗಳು ಈಗಿನ ಕಾಲದಲ್ಲಿ ಮಾನವರಿಗೆ ಸಂಬಂಧಿಸಿದ್ದಲ್ಲ.... ಅಂದರೆ ಅ-ಮಾನವೀಯ ಎಂದಾಗಿಬಿಟ್ಟಿರುವುದರಿಂದ ಈ ಅಮಾನವೀಯತೆಯನ್ನೇ ಬಂಡವಾಳವಾಗಿಟ್ಟುಕೊಳ್ಳಲು ಪುರುಷರು ನಿರ್ಧರಿಸಿದ ಪರಿಣಾಮ ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಿದೆ ಎಂದು ತಿಳಿದುಬಂದಿದೆ.

ಗುರುವಾರದಿಂದ ಈ ಕಾಯಿದೆ ಜಾರಿಗೆ ಬಂದಿರುವುದರಿಂದ ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚಳವಾಗತೊಡಗಿದೆ. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಈ ಕಾಯಿದೆ ರೂಪಿಸಿದ್ದು ಎಂದು ಸರಕಾರ ಹೇಳಿರುವುದು ಬರೀ ಬೊಗಳೆ ಎಂಬುದನ್ನು ನಮ್ಮ ಬ್ಯುರೋ ಯಾವುದೋ ಹೊತ್ತು ಗೊತ್ತಿಲ್ಲದ ನಾಡಿನಲ್ಲಿದ್ದುಕೊಂಡೇ ಅನ್ವೇಷಣೆ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಪುರುಷ ಗಡಣ ಎಂದರೇನೂ?

  ಈ ಲೇಖನ ಓದಿದ ನಾರೀ ಮಣಿಗಳು ಮಾರೀ ಗಣಿಗಳಾವುದು ಖಂಡಿತ. ಏನೇ ಆಗಲಿ, ನಮ್ಮ ಮನೆಯವರ ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸುವೆ.

  ಇಂದೂರಿನಲ್ಲಿ ಬಿಸಿಲಿನ ಝಳ ಹೆಚ್ಚಿರಬೇಕಲ್ಲವೇ? ಬೇಗನೇ ಮುಂದೂರಿಗೆ ಬಂದುಬಿಡಿ.

  ಚಂಗು ಚಂಗೆಂದು ಚಂದದೂರಿಗೆ ಹೋಗುವುದು ಯಾವಾಗ?

  ಪ್ರತ್ಯುತ್ತರಅಳಿಸಿ
 2. ಪುರುಷರಿಗೆ ಗಂಡಸು ಎಂಬ ಅರ್ಥವೂ ಇರುವುದರಿಂದ (ಶೂನ್ಯಕ್ಕೆ ಬೆಲೆ ಕೊಡದೆ) ಪುರುಷ ಗಣಗಳನ್ನು ಗಡಣ ಎಂದು ಕರೆಯಲಾಗುತ್ತಿದೆ. ಇದು ಅನರ್ಥ ಕೋಶಕ್ಕೆ ಸೇರಬಹುದಾದ ಪದ.

  ಇಂದೂರು ಊರು ತುಂಬಾ ಚೆಂದಾಗಿದೆ.ಆದ್ರೆ.... ನಮ್ಮ ಅವಸ್ಥೆ ಮಾತ್ರ ಹೀಗಿದೆ. ಆದ್ರೆ ಎಲ್ಲಾದರೂ ಅವಕಾಶ ಸಿಕ್ರೆ.... ಗಬಕ್ಕನೆ ಹಿಡಿದುಕೊಂಡು ಇಲ್ಲೇ ಇರೋದಕ್ಕೆ ರೆಡಿ!

  ಪ್ರತ್ಯುತ್ತರಅಳಿಸಿ
 3. ಅವಕಾಶ ಸಿಕ್ಕಿತು ಅಂತ ಗಬಕ್ಕನೆ ಯಾರನ್ನಾದ್ರೂ ಹಿಡಿದುಕೊಂಡು ಅಲ್ಲಿಯೇ ಠಿಕಾಣೀ ಹೂಡಬೇಡಿ. ನಿಮ್ಮನ್ನು ನಂಬಿದ ಜೀವಗಳು ಬಹಳ ಇದ್ದಾರೆ. :P

  ನಾರೀಮಣಿಯರು ನಾಗರಮರಿಗಳಾದಾರು ಜೋಕೆ!

  ಇಂದಿನ ಊರಿನಿಂದ ಬೇಗನೆ ಮುಂದಿನ ಊರಿಗೆ ಬಂದು ತಳಊರಬೇಕೆಂದು ಕೇಳಿಕೊಳ್ಳುತ್ತಿರುವೆ. ನಿಮಗೆ ಬೇಕಾದ ಅನವಶ್ಯಕಗಳನ್ನೆಲ್ಲಾ ಮಾಡಿಕೊಡುವೆ.

  ಪ್ರತ್ಯುತ್ತರಅಳಿಸಿ
 4. ಶ್ರೀ ಶ್ರೀಗಳೆ,
  ಈ ಎಚ್ಚರಿಕೆ ಒಂದು ನಿಮಿಷ ಮೊದ್ಲೇ ಕೊಡ್ಬಾರ್ದಿತ್ತಾ?!!! ಛೆ... ಎಲ್ಲಾ ಹಾಳಾಯಿತು.....

  ಇರಲಿ, ನೀವು ಮಾಡಿಕೊಡುವ ಅನವಶ್ಯಕತೆಗಳಿಗೆಲ್ಲಾ ಸಜ್ಜಾಗುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ
 5. ನಮಸ್ಕಾರ. ಇಂದೋರ್ ಎಂಚ ಉಂಡು?
  ನಿಂಕ್ಳೆ ಪುದರ್‍ನ್ ಶ್ರೀವತ್ಸ ಜೋಶಿ ಪಂಡೇರ್. ಆಕ್ಳ್ ಒಂಜಿ ಜೋಕ್ ಲಕ್ಕ-- "ಶ್ರೀಲತ ಅವರ ಬ್ಲಾಗ್‍ನಲ್ಲಿ "ಬೈಪಡಿತ್ತಾಯ"ರ ಮತ್ತು "ಮರಡಿತ್ತಾಯ"ರ ತುಳು ಕಾಮೆಂಟ್ಸ್ ಓದಿ ಅರ್ಥವಾಗದೇ ಇತರ ಓದುಗರು "ಚಡಪಡಿತ್ತಾಯ"ರಾದರು" ಪಂಡ್‍ತ್ ಎಂಕ್ IM ಅಂತೆರ್. So, ಏನ್ ಅನ್ವೇಷಣೆ ಅಂತ್‍ನ ಆತ್. ಅನ್ವೇಷಿ ನಿಂಕ್ಳ್ ಆತಿಪ್ನಗ, ಎನ್ನೊ ಜಾದೊ ಅನ್ವೇಷಣೆ?

  OK, Take care. ಬೆತ್ತ್ ಸಿಕ್ಕ್‌ಗೊ. Bye Bye.

  ಪ್ರತ್ಯುತ್ತರಅಳಿಸಿ
 6. enri iMduvina oranalli enu maDakahattiri...hoLLi baMda biDrappa...bALa jana nimage kayata idAre...

  ಪ್ರತ್ಯುತ್ತರಅಳಿಸಿ
 7. ಓಹ್ ಜ್ಯೋತಿ.... ಅಂಚನಾ ವಿಷಯ!

  ಅಬ್ಬ... ಓಳು ಲಿಂಕ್ ಲೀಕ್ ಆನಾ ಪಂಡ್‌ದ್ ಪೋಡಿಗೆ ಆತಿತ್ನ್.

  ಮುಳ್ಪ ಜಿಮೇಲ್, ಯಾಹೂ, ರೆಡಿಫ್ ಪೂರಾ ಬ್ಲಾಕ್ ಮಾಂತ್‌ತೆರ್. ಅಂಚಾತ್ ಹೊರ ಜಗತ್ತಿನ ಸಂಪರ್ಕನೇ ಇದ್ದಿ.
  ಓಳುಪ್ಪುಣ, ಜಾದೊ ಅಂತೊಂತುಳ್ಳರ್?
  ಬರೊಂತುಪ್ಲೇ.

  ಪ್ರತ್ಯುತ್ತರಅಳಿಸಿ
 8. ಓಯ್ ಅನಾನಸ್ ಅವರೆ,

  ನಾನು ಇಂದುವಿನ ಊರಿಗೆ ಹೋಗಿದ್ದೂಂತ ನಿಮಗಿಂದು ಯಾರ್ರೀ ಹೇಳಿದ್ದು? ಕಾಯ್ತಾ ಇದ್ರೆ ರೋಸ್ಟ್ ಆಗುತ್ತೆ... ತಿನ್ನಲು ಕುರುಕುರು ಆಗಿರುತ್ತೆ ಅಂತ ಅಂದ್ಬಿಡಿ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D