ಬೊಗಳೆ ರಗಳೆ

header ads

ಕಂಡಲ್ಲಿ ಗುಂಡು ಹಾಕಿದ್ದೇ ಗಲಭೆಗೆ ಕಾರಣ!

(ಬೊಗಳೂರು ಗುಂಡು ಬ್ಯುರೋದಿಂದ)
ಬೊಗಳೂರು, ಅ.11- ಇತ್ತೀಚೆಗೆ ಕರ್ನಾಟಕದ ಕರಾವಳಿ ತೀರದಲ್ಲಿ ಕೋಮು ಸಂಘರ್ಷಗಳು ಸೃಷ್ಟಿಯಾಗಲು ಮೂಲ ಪ್ರೇರಣೆಯೇ ಪೊಲೀಸರು ಎಂಬುದನ್ನು ಬೊಗಳೆ ರಗಳೆ ಬ್ಯುರೋದ ಮಹಾನ್ ಅನ್ವೇಷಣಾ ವರದಿಯೊಂದು ಕಂಡುಕೊಂಡಿದೆ.
 
ಈ ಹಿಂದೆ ಅಲ್ಲೆಲ್ಲಾ ಗಲಾಟೆ ನಡೆದಿದ್ದಾಗ ಮತ್ತು ಕೋಮು ಸಂಘರ್ಷಗಳು ನಡೆದಿದ್ದಾಗ ಪೊಲೀಸರು ಬಿಸಿಬಿಸಿಯಾಗಿರುತ್ತಿದ್ದ ಜನತೆಯನ್ನು ತಣ್ಣಗಾಗಿಸಲು ಕರ್ಫ್ಯೂ ಹೇರಿ, ಅಶ್ರುವಾಯುಗಳನ್ನು ಸಿಡಿಸುತ್ತಿದ್ದರು. ಅಷ್ಟಕ್ಕೂ ತೃಪ್ತರಾಗದ ಜನತೆಯನ್ನು ಮತ್ತಷ್ಟು ಸಂ-ತೃಪ್ತರಾಗಿಸಲು ಕಂಡಲ್ಲಿ ಗುಂಡು ಹಾಕಲು ಆದೇಶ ನೀಡುತ್ತಿದ್ದರು.
 
ಕಂಡಲ್ಲಿ ಗುಂಡು ಹಾಕಲು ನೀಡುವ ಆದೇಶವೇ ಮಂಗಳೂರು ಜನತೆಗೆ ಕೋಮು ಗಲಭೆಗೆ ಮೂಲ ಪ್ರೇರಣೆ ಎಂದು ತಿಳಿದುಬಂದಿದೆ.
 
ಈ ಆದೇಶ ಕೇಳಿದ ತಕ್ಷಣ ಮಂಗಳೂರಿಗರಲ್ಲಿ ಗಲಾಟೆ ನಿರತರನೇಕರು ಬಾರುಗಳೇ ಹೆಚ್ಚಾಗಿರುವ ಪ್ರದೇಶಕ್ಕೆ ತೆರಳಿ ಕಂಡ ಕಂಡಲ್ಲಿ ಗುಂಡು ಹಾಕಿಕೊಳ್ಳಲು ಕುಳಿತುಬಿಡುತ್ತಿದ್ದರು. ಹೇಗಿದ್ದರೂ ತ್ವೇಷಮಯ ವಾತಾವರಣವಿರುತ್ತದೆ, ಎಲ್ಲಾ ಬಾರ್ ಮಾಲೀಕರು ಹೆದರಿ ತಮಗೆ ಗುಂಡು ಹಾಕಲು ಸಹಕರಿಸುತ್ತಾರೆ ಎಂದು ಅರಿತುಕೊಂಡ ಅವರು ಸಾಕಷ್ಟು ಗುಂಡೇರಿಸಿಕೊಳ್ಳುತ್ತಿದ್ದರು.
 
ಹಣ ಕೇಳಿದವರಿಗೆ ಹೇಗಿದ್ದರೂ 'ಪೊಲೀಸರ ಆದೇಶವಿದೆ' ಎಂಬ ಸಿದ್ಧ ಉತ್ತರವಿದೆ ಎಂಬ ಹಮ್ಮು ಅವರದು ಎಂದು ಭೀಕರ ತನಿಖೆಯೊಂದರಿಂದ ತಿಳಿದುಬಂದಿದೆ.
 
ಹೀಗಾಗಿ ಅವರ್ಯಾರೂ ಕಂಡಲ್ಲಿ ಗುಂಡು ಹಾಕಲು ಹೆದರುವುದಿಲ್ಲ ಮತ್ತು ಗುಂಡು ಹಾಕುತ್ತಲೇ ಗಾಳಿಯಲ್ಲಿ ಗುಂಡು ಹಾರಿಸಿದಂತೆ ತೇಲಾಡುತ್ತಿರುತ್ತಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. Houdu anveshi,

  nammuralli ellaru kanDa kanDalli gunDu haakutta iddaare....
  nin reportE adke kaaraNa ansutte!!!!

  ಪ್ರತ್ಯುತ್ತರಅಳಿಸಿ
 2. ನಿಮ್ಮ ಬ್ಲಾಗಿನಲ್ಲೂ ಯಾವಾಗಲೇ ನೋಡಿದ್ರೂ ಗುಂಡು ತುಂಡುಗಳೇ ರಾರಾಜಿಸುತ್ತಿವೆ :D

  (ತಮಾಷೆಗೆ ಹೇಳಿದೆ ಅಷ್ಟೆ.)

  ಇಂದು ಯಾಕೋ ಗುಂಡು ರುಚಿಯಾಗಿಲ್ಲ ಅಂತ ನನ್ನ ಸ್ನೇಹಿತರು ಹೇಳ್ತಿದ್ದಾರೆ. ಉಪ್ಪು ಖಾರ ಹೆಚ್ಚು ಕಡಿಮೆ ಆಯ್ತಾ?

  ಪ್ರತ್ಯುತ್ತರಅಳಿಸಿ
 3. ಹೇಯ್ ಶೀಲಾ...
  ನಿಮ್ಮೂರಲ್ಲಿ ಎಲ್ಲರೂ ಅಂದ್ರೆ....
  ಓಹ್....
  ನೀನೂ ಸಹ!
  ಅಬ್ಬಬ್ಬಾ.... ದೂರ... ದೂರ..!

  ಪ್ರತ್ಯುತ್ತರಅಳಿಸಿ
 4. ಇತ್ತೀಚೆಗೆ ಗುಂಡು ತುಂಡುಗಳಲ್ಲಿ ಗಂಡುಗಳನ್ನೂ ಮೀರಿಸುವವರು ಎಲ್ಲೆಡೆ ಕಾಣುತ್ತಿರುವುದರಿಂದಾಗಿ ಈ ರೀತಿಯ ಬೊಗಳೆ ಶ್ರೀನಿವಾಸರೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D