ಬೊಗಳೆ ರಗಳೆ

header ads

ರಬೀಸ್ ಲಸಿಕೆ ನಾಯಿಗಳಿಗೆ ಮಾತ್ರವೇಕೆ?

(ಬೊಗಳೂರು ಪ್ರಾಣಿಪ್ರಿಯ ಬ್ಯುರೋದಿಂದ)
ಬೊಗಳೂರು, ಸೆ.29- ರಬೀಸ್ ರೋಗ ನಿರೋಧಕ ಲಸಿಕೆಯನ್ನು ನಾಯಿಗಳಿಗೆ ಮಾತ್ರವೇ ಯಾಕೆ ಕೊಡಬೇಕು ಎಂಬ ಬಗ್ಗೆ ದೇಶಾದ್ಯಂತ ಜನಜಾಗೃತಿ ಜತೆಗೆ ಶ್ವಾನಜಾಗೃತಿಯನ್ನೂ ಮೂಡಿಸಲು ಬೊಗಳೆ ರಗಳೆ ಬ್ಯುರೋ ನಿರ್ಧರಿಸಿದೆ.
 
ನಾಯಿ ಕಚ್ಚುವ ಮಾನವರಿಗೆ ಮತ್ತು ಒಮ್ಮೊಮ್ಮೆ ನಾಯಿಗೇ ಕಚ್ಚುವ ಮಾನವರಿಗೇಕೆ ಚುಚ್ಚಲಾಗುವುದಿಲ್ಲ ಎಂಬುದು ಭೀಕರ ಸಂದೇಹಕ್ಕೆ ಕಾರಣವಾಗಿರುವ ಅಂಶವಾಗಿದ್ದು, ಈ ಅಭಿಯಾನದಲ್ಲಿ ಹಲವಾರು ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಅದರ ಕೆಲವು ಪ್ರಶ್ನೆಗಳು ಹೀಗಿರುತ್ತವೆ:
 
ಏಡ್ಸ್ ಔಷಧವನ್ನು ಮಾನವರ ಮೇಲೆ ಮಾತ್ರ ಪ್ರಯೋಗಿಸುವುದೇಕೆ, ಹಾದಿ ಬೀದಿಯಲ್ಲಿ ಗಲಾಟೆ ಮಾಡುತ್ತಿರುವ ನಾಯಿಗಳ ಮೇಲೆ ಯಾಕೆ ಪ್ರಯೋಗಿಸುವುದಿಲ್ಲ?
 
ಏಡ್ಸ್‌ಗೆ ಲಸಿಕೆ ಕಂಡುಹಿಡಿಯಲು ಇಲಿಯ ಮೇಲೆಯೇ ಅಥವಾ ಹಂದಿಯ ಮೇಲೆಯೇ (guinee pig) ಪ್ರಯೋಗ ಮಾಡಬೇಕು ಯಾಕೆ. ಏಡ್ಸ್ ಕಾಡುವ ಮಾನವರ ಮೇಲೇಕೆ ಪ್ರಯೋಗವಿಲ್ಲ?
 
ಪೋಲಿಯೋ ಲಸಿಕೆಯನ್ನು ಹುಟ್ಟಿದ ಮಕ್ಕಳಿಗೇ ಯಾಕೆ ಕೊಡಬೇಕು? ಮಕ್ಕಳು ಹುಟ್ಟುವ ಮೊದಲೇ ಅವುಗಳ ಅಪ್ಪ-ಅಮ್ಮಂದಿರಿಗೆ ಮಾತ್ರ ಕೊಟ್ಟರಾಗದೆ?
 
ಇದರ ಜತೆಗೆ ಪುಟ್ಟ ಮಕ್ಕಳಿಗೆ ಅಷ್ಟುದ್ದದ ಸೂಜಿ ಚುಚ್ಚಿ ಹಿಂಸೆ ನೀಡುವುದೇಕೆ? ಎಲ್ಲವನ್ನೂ ಈ ಮಕ್ಕಳ ಪೂರ್ವಜರಿಗೇ ಕೊಟ್ಟು ಖಾಲಿ ಮಾಡರಾಗದೇ? ಇತ್ಯಾದಿ ಪ್ರಶ್ನೆಗಳನ್ನು ಹಿಡಿದುಕೊಂಡು ಜನರನ್ನು ಅಲುಗಾಡಿಸಿ ಎಚ್ಚರಿಸುವ ಆಂದೋಲನ ಮಾಡಲು ಉದ್ದೇಶಿಸಲಾಗಿದೆ.
 
ಬನ್ನಿ ಕೈಜೋಡಿಸಿ.... ಕಾಲೆಳೆಯಿರಿ....

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ನಾಯಿಗಳ ಈ ಆಂದೋಲನಕ್ಕೆ ನನ್ನ ಸಹಾನುಭೂತಿ ಇದೆ. ಯಾಕೇಂದ್ರೆ ಈಗೀಗ ಮಾನವರು ನಾಯಿಗಳನ್ನು ಕಚ್ಚೋದು ಜಾಸ್ತಿ ಆಗಿ (ಅವರವರೇ ಕಿವಿಯನ್ನೂ ಕಚ್ಚೋದೂ ಸಾಮಾನ್ಯದ ಸಂಗತಿ), ಅವರಿಗೂ ಲಸಿಕೆಯನ್ನು ನೀಡಬೇಕು.

    ಈಗ ನನಗೊಂದು ಅನುಮಾನ, ನಾನು ನೀವು ಯಾವ ಜಾತಿಗೆ ಸೇರ್ತೀವಿ? ಲಸಿಕೆ ಅಂದ್ರೆ ಚುಚ್ಚೋದು ತಾನೆ? ನನಗೆ ಬಹಳ ನೋವಾಗತ್ತೆ. ನನಗೆ ಲಸಿಕೆ ಬೇಡ.

    ಪ್ರತ್ಯುತ್ತರಅಳಿಸಿ
  2. ಮಾವಿನರಸರೆ,

    ಈ ನಿಮ್ಮ ಆರೋಪವನ್ನು ಸ್ವಲ್ಪ ಮೆಲ್ಲಗೆ, ಮೆತ್ತಗೆ ಮಾಡಿಬಿಡಿ. ಯಾಕಂದ್ರೆ ಮೈಕ್ ಟೈಸನ್ ಮತ್ತೆ ಬಾಕ್ಸಿಂಗ್ ಕಣಕ್ಕಿಳಿಯಲಿದ್ದಾನೆ ಅಂತ ಸುದ್ದಿ ಬಂದಿದೆ.

    ಮತ್ತೆ,
    ಲಸಿಕೆ ಚುಚ್ಚಬೇಕಾಗಿಲ್ಲ, ಬಾಟಲಿಗಟ್ಟಲೆ ಏರಿಸಿಕೊಳ್ಳಲೂಬಹುದು!

    ಪ್ರತ್ಯುತ್ತರಅಳಿಸಿ
  3. ವಿಧಾನ ಸೌಧದ ಹೊರಗೆ ಪೊಲೀಸ್‌ ನಾಯಿಗಳನ್ನು ನಿಲ್ಲಿಸಿದಂತೆ ಒಳಗೂ ನೂರಾರು ನಾಯಿಗಳನ್ನು ನಿಲ್ಲಿಸಿದರೆ ಒಳಗೆ ನಡೆಯುವ ಘರ್ಷಣೆ ಕಡಿಮೆಯಾಗಲಿಕ್ಕಿಲ್ಲವೇ? ಶ್ವಾನ ಹಿತರಕ್ಷಣಾ ವೇದಿಕೆಯ 'ನಾಯಿ'ಕರೊಬ್ಬರು ಕೊಟ್ಟ ಸಲಹೆಯನ್ನು ನಿಮಗೆ ಹೇಳಿದ್ದೇನೆ. ನಿಮ್ಮ ಪ್ರಭಾವ ಬಳಸಿ ಸೂಕ್ತ ಕ್ರಮ ಕೈಗೊಳ್ಳಿ ಅಸತ್ಯಾನ್ವೇಷಿಗಳೇ.

    ಪ್ರತ್ಯುತ್ತರಅಳಿಸಿ
  4. ವೇಣು ಅವರೆ,
    ನಾಯಿಯ ಕರು ಕೊಟ್ಟ ಸಲಹೆಯನ್ನು ಇಲ್ಲಿಗೆ ಛೂಬಿಟ್ಟಿದ್ದಕ್ಕೆ ಧನ್ಯವಾದ.
    ಆದರೆ
    ಪೊಲೀಸ್ ನಾಯಿಗಳನ್ನು ನಿಲ್ಲಿಸುವುದೇ ಅಥವಾ ನಾಯಿಗಳೇ ಪೊಲೀಸರನ್ನು ನಿಲ್ಲಿಸುವುದೇ ಎಂಬುದು ಸ್ವಲ್ಪ ಗೊಂದಲದಲ್ಲಿದೆ. :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D