ಬೊಗಳೆ ರಗಳೆ

header ads

ನಿಮ್ಮ ವಾರ ಭವಿಷ್ಯ ಇಲ್ಲಿದೆ!!!

ಮೇಷ

ನೀವಿದನ್ನು ಓದುತ್ತಾ ಕಾಲ ಕಳೆಯುತ್ತೀರಿ.

 

ವೃಷಭ

ಮನೆಗೆ ನಿಮ್ಮನ್ನು ಹುಡುಕಿಕೊಂಡು ಶಾಂತಿ ಬರುವುದರಿಂದ ಮನೆ ತುಂಬಾ ಅಶಾಂತಿ ಏಳಬಹುದು.

 

ಮಿಥುನ

ಮನೆಯಲ್ಲಿ ಹೆಂಡತಿ ಕೋಪಿಸಿಕೊಳ್ಳುವುದರಿಂದ ನಿಮ್ಮ ಖರ್ಚು ಹೆಚ್ಚಾಗಬಹುದು. ಹೋಟೆಲೂಟವೋ , ಸೀರೆಯೋ ಇತ್ಯಾದಿ ಖರ್ಚುಪಟ್ಟಿಯಲ್ಲಿ ಸೇರಬಹುದಾಗಿದೆ.

 

ಕಟಕ

ನಿಮ್ಮ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವುದರಿಂದ ನಿಮ್ಮ ವೈದ್ಯರಿಗೆ ಧನಲಾಭ.

 

ಸಿಂಹ

ನೀವಿಂದು ಹಲ್ಲು ಕೀಳಿಸಿಕೊಳ್ಳಲು ದಂತವೈದ್ಯರಲ್ಲಿಗೆ ಹೋಗಬೇಕಾದ ಪ್ರಮೇಯವೇ ಬರುವುದಿಲ್ಲ. ಯಾಕಂದ್ರೆ ನೀವಾಡುವ ಮಾತಿಗೆ ಮನೆಯಲ್ಲೇ ಸುಲಭವಾಗಿ ಹಲ್ಲು ಉದುರುತ್ತದೆ.

 

ಕನ್ಯಾ

ನೀವು ಇತರರಿಗೆ ಟೋಪಿ ಹಾಕಲು ನಿರ್ಧರಿಸಿರುವುದರಿಂದ ಉತ್ತಮ ಹಣಕಾಸು ಆದಾಯವಿದೆ. ಆದರೆ ಪೊಲೀಸರು ನಿಮ್ಮಿಂದ ಕದಿಯಬಹುದು. ಎಚ್ಚರವಿರಲಿ.

 

ತುಲಾ

ನೀವು ಸಿಕ್ಕಾಪಟ್ಟೆ ತಿನ್ನುವುದರಿಂದ ಸಮ ಅನುಪಾತದಲ್ಲಿ ಅಷ್ಟೇ ಹೊರಗೆ ಹೋಗಬಹುದು. ತೂಕ ಮಾಡಿ ನೋಡಿ , ಹೋಗದಿದ್ದರೆ ಒಂದಿಷ್ಟು ನೀರು ಕುಡಿಯಿರಿ.

 

ಮಕರ

ನಿಮ್ಮ ಹಳೇ ಗೆಳತಿ ಮನೆಗೆ ದಿಢೀರ್ ಭೇಟಿ ನೀಡುವುದರಿಂದ ಮನೆಯೊಳಗೆ ಲಟ್ಟಣಿಗೆ , ಪಾತ್ರೆಪಗಡಿ ಇತ್ಯಾದಿಗಳು ಹಾರಾಡುತ್ತಿರುತ್ತವೆ. ಮಗುವೊಂದು ದೂರದಲ್ಲಿ ಕುಳಿತು ಅಳುತ್ತಿರುತ್ತದೆ.

 

ಕುಂಭ

ಶ್ರಮದಿಂದ ಧನಲಾಭ ಎಂಬ ಯೋಗವಿರುವುದರಿಂದ ಹಣವಿದ್ದ ಬೀರುವಿನ ಬಾಗಿಲು ತೆಗೆಯಲು ಭಾರಿ ಶ್ರಮ ಪಡಬೇಕಾಗುತ್ತದೆ.

 

ಮೀನ

ಅಧಿಕ ಧನಾಗಮನ ನಿರೀಕ್ಷೆ ಇರುವುದರಿಂದ ನಿಮ್ಮ ಪರ್ಸು ದೊಡ್ಡದು ಮಾಡಿಕೊಳ್ಳಿ. ಜೇಬುಗಳ್ಳರು ನಿಮ್ಮ ದೊಡ್ಡ ಕಿಸೆಯ ಸುತ್ತಲೇ ಸುತ್ತುತ್ತಿರುತ್ತಾರೆ.
 
ನಾವು ಮೊದಲೇ ಜಾಹೀರಾತು ನೀಡಲಿಲ್ಲವೇ? ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಲ್ಲ.... ಬೊಗಳೆ ರಗಳೆ ಬ್ಯುರೋ ಕೈಯಲ್ಲಿದೆ ಅಂತ !!!

ಕಾಮೆಂಟ್‌‌ ಪೋಸ್ಟ್‌ ಮಾಡಿ

17 ಕಾಮೆಂಟ್‌ಗಳು

 1. re bogaLe bidoke miti irabeku...
  rashigaLu 12...neevu illi koTTirodu 10 rashi bhavishya...
  VRushchika adaralli missingu!!!!
  yakri lunch togaNdra illa Pubge bheTi niDiddara?

  ಪ್ರತ್ಯುತ್ತರಅಳಿಸಿ
 2. ಮಹಂತೇಶ ಅವರಿಗೆ ಚೇಳು ಕುಟುಕಿದ್ದು ಗೊತ್ತಿಲ್ವೇ? ಆಗ ಎರಡು ಮೆಟ್ಟಿಲು ಹಾರಿದ್ರು.

  ನನ್ನ ಭವಿಷ್ಯ ಯಾಕೋ ಸರಿ ಇಲ್ಲ ಅನ್ನಿಸ್ತಿದೆ. ಪತ್ನಿಯನ್ನೊಮ್ಮೆ ಕೇಳಿ ನೋಡ್ಬೇಕು.

  ಇವತ್ಯಾಕೋ ಊಟದಲ್ಲಿ ರುಚಿಯೇ ಇಲ್ಲ. ಬೋಡಮ್ಮನವರ ಸಪ್ಪೆಯೂಟದಂತಿದೆ. (ಸುಮ್ನೆ ಕಾಲೆಳೆಯಿಂಗು).

  ಈ ಕಾಲಮ್ಮನ್ನು ಪ್ರತ್ಯೇಕವಾಗಿ ಸ್ಟಿಕ್ಕಿ ಮಾಡಿಬಿಡಿ. ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 3. ರೀ ಮಹಾಂತೇಶರೆ,
  ರಾಶಿಗಳು 12 ಅಂತ ನಮಗೇನಾದ್ರೂ ಕನಸು ಬೀಳುತ್ವಾ? ಮೊನ್ನೆ ಮೊನ್ನೆ ಒಂದು ಗ್ರಹ ಪ್ಲುಟೋ ಆಗಸದಲ್ಲೇ ಪಠಾರ್ ಅಂದ ಕಾರಣ ನಾವು ಕೂಡ ಇಡೀ ರಾಶಿಯನ್ನು ಎತ್ತಿ ಆಕಡೆ ಇಟ್ಟೆವು... ಹಾಗಾಗಿ ನಿಮಗೆ ರಾಶಿ ರಾಶಿ ಮಿಸ್ ಆದ್ಹಾಗೆ ಕಾಣಿಸುತ್ತೆ ಅಷ್ಟೆ. ಇಷ್ಟಕ್ಕೂ ನಿಮ್ಮ ರಾಶಿ ಮಿಸ್ ಆಗಿದ್ದೇ ಆಗಿದ್ದರೆ, ಈಗಲೇ ಭವಿಷ್ಯ ನುಡಿಯಲಾಗುತ್ತದೆ. ಅದನ್ನು ಕೇಳಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೀರಾ? :)

  ಪ್ರತ್ಯುತ್ತರಅಳಿಸಿ
 4. ಮಾವಿನರಸರೆ,

  ನಿಮ್ಮ ನಿಮ್ಮ ಪ್ರತಿಕ್ರಿಯೆ ಕೇಳಿ ನಿಮ್ಮ ರಾಶಿ ಯಾವುದಿರಬಹುದೆಂದು ತೀರ್ಮಾನಿಸುವ ವಿಶಿಷ್ಟ ಜ್ಯೋತಿಷ್ಯವಿದು... :)

  ಬೋಡಮ್ಮ ಅಂದ್ರೆ ಗೊತ್ತಾಗಲಿಲ್ಲ... ಸ್ವಲ್ಪ ವಿವರಿಸ್ತೀರಾ? ಹಾಗಂದ್ರೆ ಗ್ರಹವೇ? ರಾಶಿಯೇ?

  ಪ್ರತ್ಯುತ್ತರಅಳಿಸಿ
 5. ದಿನ ಭವಿಷ್ಯ ಯಾವಾಗ ಬರುತ್ತೆ? ವಾರಕ್ಕೆಲ್ಲ ಇದೇ ಭವಿಷ್ಯನಾ? :)

  ಪ್ರತ್ಯುತ್ತರಅಳಿಸಿ
 6. ಬೋಡಮ್ಮ ಅಂದ್ರೆ ವಿತಂತು. ಜರ್ಮನ್ ಸೋಲ್ಜರ್ - ಇನ್ನೂ ಗೊತ್ತಾಗ್ಲಿಲ್ವೇ? ಹಿಂದಿನ ಕಾಲದಲ್ಲಿ ಪತಿ ವಿಯೋಗವಾದ ಮೇಲೆ ವಿಧವೆ ತಲೆ ಬೋಳಿಸಿ ಕೆಂಪು ಸೀರೆಯಿಂದ ತಲೆಯನ್ನು ಮುಚ್ಚಿಕೊಂಡಿರುತ್ತಾರೆ. ಫಣಿಯಮ್ಮ ಚಿತ್ರ ನೆನಪಿದೆ ಅಲ್ವೇ?

  ಅಂತಹವರು ಖಾರ, ಹುಳಿ, ಉಪ್ಪು, ಸಿಹಿ ತಿನ್ನೋಲ್ಲ. ಅದರಿಂದ ಆಸೆ ಹೆಚ್ಚಾಗುತ್ತದಂತೆ. ಅದರ ಬದಲಿಗೆ ಸಪ್ಪೆ ಊಟ ಮಾಡುವರು.

  ಪ್ರತ್ಯುತ್ತರಅಳಿಸಿ
 7. ಮನಸ್ವಿನಿ ಅವರೆ,

  ಎಲ್ಲಾ ದಿನಗಳೂ ನೀವು ನಿಮ್ಮ ಭವಿಷ್ಯವನ್ನು ನಮ್ಮ ಕೈಗೆ ಕೊಟ್ಟರೆ ಹೇಗೆ? ಹಾಗಾಗಿ ವಾರಕ್ಕೊಮ್ಮೆ ಮಾತ್ರ ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿರುತ್ತದೆ.

  ವಾರದಲ್ಲಿ ಏಳು ದಿನ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ನಿಮ್ಮ ನಿಮ್ಮ ಕೆಲಸ ಕಾರ್ಯಗಳಿಗೆ ನೀವೇ ಜವಾಬ್ದಾರರು !

  ಪ್ರತ್ಯುತ್ತರಅಳಿಸಿ
 8. e rAshi yaari? nanage rashigaLu gottu...avu anAdi kAladiMdalU 12 ive...
  nimma bhavishyaenu beDa...nanna bhavishya nanage gottu :)-

  aMda hAge nimdu yAva rAshi?

  ಪ್ರತ್ಯುತ್ತರಅಳಿಸಿ
 9. ನನ್ನ ರಾಶಿ ಕಳೆದುಹೋಗಿದೆ ಮಹಾಂತೇಶರೇ, ಅದುವೇ ಮಿಸ್. ರಾಶಿ.

  ನೀವು ಬೇಡ ಎಂದರೂ ನಾವು ಕೇಳಬೇಕಲ್ಲ... ನಿಮ್ಮ ಭವಿಷ್ಯ ಹೇಳಿಯೇ ಬಿಡುತ್ತೇವೆ...!!! :)

  ಪ್ರತ್ಯುತ್ತರಅಳಿಸಿ
 10. "ಮಿತ್ರನಿಂದ ಪುತ್ರಲಾಭ" ಎಂಬ ವಾಕ್ಯವೇ ಇಲ್ಲದ ಇದು ಎಂಥ ಭವಿಷ್ಯವಯ್ಯಾ?

  ಪ್ರತ್ಯುತ್ತರಅಳಿಸಿ
 11. ಓ.... ವಿಚಿತ್ರಾನ್ನದಾನಿಗಳೆ, ಬಂದ್ರಾ...

  ನಮ್ಮ ಅಕ್ಕನ ಮನೆಯಲ್ಲಿ ನೀವು ಭರ್ಜರಿ ವಿಚಿತ್ರಾನ್ನ ಉಣಬಡಿಸಿದ್ದೀರಂತ ಕೇಳಿದ್ದೇವೆ.
  ಇರಲಿ...

  ನಿಮ್ಮ ಈಗಿನ ಸಲಹೆ ಬಗ್ಗೆ ತಲೆಕೆರೆದುಕೊಳ್ಳಲಾಗುವುದು... !!!!

  ಪ್ರತ್ಯುತ್ತರಅಳಿಸಿ
 12. ಸ್ವಾಮಿ ಅಸತ್ಯಾನ್ವೇಷಿಗಳೇ...
  ಇಂಥವೆಲ್ಲ ರಾಶಿ ಭವಿಷ್ಯ ಹೇಳಿದ್ರೆ ನಿಮ್ಮ ಭವಿಷ್ಯವೇನಾದೀತು? ರಾಶಿ ಭವಿಷ್ಯ ಹೇಳಿ ರಾಶಿ ರಾಶಿ ಗಳಿಸುವ ಕಲೆ ಅಭ್ಯಸಿಸಿಕೊಂಡರೆ ಮಾತ್ರವೇ ಈಗ ಲಾಭ. ಏನಂತೀರ?

  ಪ್ರತ್ಯುತ್ತರಅಳಿಸಿ
 13. ವೇಣು ವಿನೋದರೇ,
  ನಮ್ಮ ಬ್ಲಾಗಿಗೆ ಸ್ವಾಗತ.

  ರಾಶಿ ರಾಶಿ ಗಳಿಸುವ ಸಲುವಾಗಿಯೇ ರಾಶಿ ಭವಿಷ್ಯ ಆರಂಭಿಸಿದ್ದೆಂಬ ವಾದ ಮಂಡಿಸಿ ನಮ್ಮ ಮರ್ಯಾದೆಯನ್ನು ಮೂರೂವರೆ ಕಾಸಿಗೆ ಹರಾಜು ಹಾಕಿದ್ದಕ್ಕೆ ಧನ್ಯವಾದಗಳು.
  ಈ ಗುಟ್ಟನ್ನು ಬೇರೆಲ್ಲೂ ಬಾಯಿಬಿಡಬೇಡಿ..!!!

  ಪ್ರತ್ಯುತ್ತರಅಳಿಸಿ
 14. ಹೌದಲ್ಲಾ... ಪಬ್ಬಿಗರೇ!!!!

  ಹಳತಾದಷ್ಟೂ ಹೆಂಡದ ಪರಿಣಾಮ ಹೆಚ್ಚು ಅಂತ ಕೇಳಿದ್ದೇವೆ. ಅಂದರೆ ಗೊಬ್ಬರ ಮಾಡಿದರಷ್ಟೇ ಪಬ್ಬಿನಲ್ಲಿ ದೊರೆಯುವ ಹೆಂಡದ ಅಬ್ಬರ ಹೆಚ್ಚು.

  ಪ್ರತ್ಯುತ್ತರಅಳಿಸಿ
 15. asatya anveshigale
  nimma asatya bhavisya famous aagide.
  khyatha jyothishi (vatsa joshi) avare bandidare allva
  nanna thooka sariyagi ide (tula)

  ಪ್ರತ್ಯುತ್ತರಅಳಿಸಿ
 16. ಜಿತೇಂದ್ರರೆ,
  ನಿಮ್ಮ ತೂಕ ಸರಿಯಾಗಿದೆ ಎಂದು ಕೇಳಿ ಆತಂಕವಾಯಿತು. ತೂಕ ಮತ್ತು ಅಳತೆ ವಿಭಾಗದ ಅಧಿಕಾರಿಗಳನ್ನೊಮ್ಮೆ ಛೂಬಿಟ್ಟು ಪರಿಶೀಲನೆ ಮಾಡುತ್ತೇವೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D