ಬೊಗಳೆ ರಗಳೆ

header ads

ಟಿಕೆಟ್ ಒಂದು, ವಿಮಾನ ಯಾನ ಇನ್ನೂ ಒಂದು !

(ಬೊಗಳೂರು ಸಂಚಾರಿ ಬ್ಯುರೋದಿಂದ)
ಬೊಗಳೂರು, ಸೆ.18- ಒಂದೇ ಟಿಕೆಟಿಗೆ ಎರಡು ಬಾರಿ ವಿಮಾನದಲ್ಲಿ up and down ಸಂಚಾರ ನಡೆಸಿದ ಯುವತಿ ಇದೀಗ ಸಂಶೋಧನೆಗೊಂದು ವಸ್ತುವಾಗಿದ್ದಾಳೆ. ಆಕಾಶದಲ್ಲಿ ಲೋಹದ ಹಕ್ಕಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲೂ ಟ್ರಾಫಿಕ್ ಜಾಮ್ ಆಗುತ್ತಿದ್ದರೂ ಆಕೆ ದೂರಾಲೋಚನೆ ನಡೆಸಿಯೇ ವಿಮಾನದಲ್ಲಿ ನಿದ್ದೆ ಮಾಡುವ ಕ್ರಮಕ್ಕೆ ಮುಂದಾಗಿದ್ದಾಳೆ ಎಂದು ಬೊಗಳೆ ರಗಳೆ ಬ್ಯುರೋ ವರದಿ ಮಾಡಿದೆ.
 
ಈಗಾಗಲೇ ಅಗ್ಗದ ಟಿಕೆಟ್ ಎನ್ನುತ್ತಾ ವಿಮಾನ ಕಂಪನಿಗಳು ವಿವಿಧ ಆಮಿಷ ತೋರಿಸಿ ಸುಲಿಗೆ ಮಾಡುತ್ತಿವೆ. ಮತ್ತು ವಿಮಾನ ಸೇವೆ ಒದಗಿಸಲು ಪೈಪೋಟಿ ನಡೆಸುತ್ತಾ, ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆದರೆ ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಲೋಕಮುಖಕ್ಕೆ ತೋರಿಸಿಕೊಡುವ ನಿಟ್ಟಿನಲ್ಲೇ ಈ ತರುಣಿ ನಿದ್ರಾ ಪ್ರಯೋಗ ಕೈಗೊಂಡಳು ಎಂಬುದು ಖಚಿತವಾಗಿದೆ.
 
ಈ ಪ್ರಯೋಗದ ಹಿಂದೆ ಇನ್ನೂ ಒಂದು ದುರ್ಉದ್ದೇಶವಿದೆ. ವಿಶ್ವಾದ್ಯಂತ ಅಶಾಂತಿ, ಅಸಮಾಧಾನ, ಹಿಂಸಾಚಾರ, ಉಗ್ರವಾದ ಇತ್ಯಾದಿ ಹೆಚ್ಚುತ್ತಿದೆ. ಭೂಮಿಯಲ್ಲಿ ಗಟ್ಟಿಯಾಗಿ ಗೊರಕೆ ಹೊಡೆಯಲು ಸಾಧ್ಯವಿಲ್ಲದ ಸ್ಥಿತಿ ಇದೆ. ಹಾಗಾಗಿ ಸದಾ ಕಾಲ ಆಕಾಶದಲ್ಲಿ ಸುಖಾ ಸುಮ್ಮನೆ ನಿದ್ರೆ ಮಾಡುತ್ತಲೇ ಕಾಲ ಕಳೆಯೋದು ಹೇಗೆಂಬುದನ್ನೂ ಪ್ರಯೋಗ ಮಾಡಿ ನೋಡೋಣ ಎಂದಾಕೆ ನಿರ್ಧರಿಸಿದ್ದಳು.
 
ಈ ಬಗ್ಗೆ ವಿಮಾನದ ಅಧಿಕಾರಿಗಳನ್ನು ಪ್ರಶ್ನಿಸುವ ಬದಲು, ಉದ್ದೇಶಪೂರ್ವಕವಾಗಿ ಗಗನ ಸಖಿಯರನ್ನು ಪ್ರಶ್ನಿಸಿದಾಗ, ವಿಮಾನ ಎರಡು ಬಾರಿ ಅತ್ತಿಂದಿತ್ತ ಹೋಗಿ ಬಂದರೂ ವಿಮಾನದ ಸದ್ದಿನ ನಡುವೆ ಈಕೆಯ ಗೊರಕೆ ಸದ್ದು ಅಡಗಿ ಹೋಗಿದ್ದುದೇ ತಮಗೆ ಇದರ ಬಗ್ಗೆ ಅರಿವಿಗೆ ಬಾರದಿರುವುದಕ್ಕೆ ಕಾರಣ ಎಂದು ಉತ್ತರಿಸಿದ್ದಾರೆ.
 
ಎಲ್ಲ ಅಯೋಮಯವಾದ ಹಿನ್ನೆಲೆಯಲ್ಲಿ, ಆ ತರುಣಿಯನ್ನೇ ನೇರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು. ಆಕೆ ಕೂಡ ಬ್ಯುರೋ ಸಿಬ್ಬಂದಿಗಳನ್ನು ಪ್ರತಿಯಾಗಿ ತರಾಟೆಗೆ ತೆಗೆದುಕೊಂಡರೂ ಅದನ್ನು ಮುಖ ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿ ಪ್ರಕಟಿಸಲಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುವುದಿಲ್ಲ.
 
ಆಕೆ ಹೇಳಿದ್ದೇನು ಗೊತ್ತೆ? ಬಸ್ಸು, ರೈಲು, ವಿಮಾನಗಳಲ್ಲಿ No Smoking ಅಂತ ದೊಡ್ಡದಾಗಿ ಬೋರ್ಡ್ ಹಾಕುತ್ತಾರೆ, ಆದರೆ No Sleeping ಅಂತ ಹಾಕೋದಿಕ್ಕೇನು ಧಾಡಿ ಎಂದು ನಮ್ಮನ್ನೇ ಸಂದರ್ಶನ ಮಾಡುವ ಧಾಟಿಯಲ್ಲಿ ಪ್ರಶ್ನಿಸಿ ಬಿಟ್ಟಳು.
 
--------------------
ಜಾಹೀರಾತು

ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ!!!!

ಶೀಘ್ರವೇ ಬೊಗಳೆ ರಗಳೆ ಬ್ಯುರೋದಿಂದ ನಿಮ್ಮ ಭವಿಷ್ಯ ಪ್ರಕಟವಾಗಲಿದೆ. ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ!!!

ಹೆಚ್ಚು ಕೊಟ್ಟವರ ಭವಿಷ್ಯ ಹೆಚ್ಚು ಹೆಚ್ಚು ಉಜ್ವಲವಾಗಿರುತ್ತದೆ!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. oLLe biTTi prayaNa...nAnu koDa try mAdona aMta idini :)--
    namma bhavishya namma kaiyalli irrutte aMta kelidde..adre neevu eno side business shuru mADida hAgide... giNishartana? kai nODi kai koDada? ella bere thara method aMta tiLisidare book maDokke anakula agtittu..

    ಪ್ರತ್ಯುತ್ತರಅಳಿಸಿ
  2. ನಾನು ಕೂಡ ಅದೇ ವಿಮಾನದಲ್ಲಿದ್ದೆ ಮಹಾಂತೇಶರೇ,
    ಹಾಗಾಗಿ ಬರೋದು ತಡವಾಗಿದ್ದು, ಅಂದ್ರೆ ಒಂದೇ ಬಾರಿಗೆ ಎರಡು ಟ್ರಿಪ್ ಮುಗಿಸಿ ಬರಬೇಕಲ್ಲ...!!!

    ಪ್ರತ್ಯುತ್ತರಅಳಿಸಿ
  3. ಬಿಟ್ಟಿ ವಿಮಾನ ಪ್ರಯಾಣ. ನನಗೆ ಈ ವಿಷಯ ಮೊದಲೇ ಯಾಕೆ ತಿಳಿಸ್ಲಿಲ್ಲ. ನಾನೂ ಬರ್ತಿದ್ದೆ. ಮನೆಯಲ್ಲಿ ಹೇಗೂ ನಿದ್ರೆ ಬರೋಲ್ಲ. ಅಲ್ಲಿಯಾದ್ರೂ ಒಳ್ಳೆಯ ನಿದ್ರೆ ಮಾಡಬಹುದಿತ್ತು. ಇದು ತುಂಬಾ ಮೋಸ. ಇನ್ಮೇಲೆ ನಾನು ನಿಮ್ಮಗಳ ಜೊತೆ ಮಾತನಾಡೋಲ್ಲ.

    ನಿಮ್ಮ ಹೊಸ ಬ್ಯುರೋಗೆ ನನ್ನನ್ನು ಮುಂಬಯಿ ವರದಿಗಾರನನ್ನಾಗಿ ಸೇರಿಸಿಕೊಳ್ಳಿ. ಆಗಾಗ್ಯೆ ಇಲ್ಲಿಂದ ಗಾಳಿ ಸುದ್ದಿ ಕೊಡ್ತಿರ್ತೀನಿ. ಆದ್ರೆ ಸಾಕಿ, ಶಲ್ಲಿಕಾ ಅವರ ವೈಯಕ್ತಿಕ ತನಿಖೆ ಮಾಡೋಕ್ಕೆ ಮಾತ್ರ ತಿಳಿಸ್ಬೇಡಿ.

    ಅಂದ ಹಾಗೆ ಸಂಬಳ ಎಷ್ಟು ಕೊಡ್ತೀರಿ?

    ಪ್ರತ್ಯುತ್ತರಅಳಿಸಿ
  4. ಮಾವಿನಯನಸರೆ,
    ನಿಮಗೆ ನಿದ್ದೆ ಬಾರದಿರಲು ಶಾಕಿ, ಶಲ್ಲಿಕಾ ಮುಂತಾದವರು ಮುಂಬಯಿಯಲ್ಲೇ ಠಿಕಾಣಿ ಹೂಡಿರುವುದೂ ಕಾರಣವಾಗಿರಬಹುದೇ ಎಂಬ ಬಗ್ಗೆ ತನಿಖೆ ಮಾಡಿ ವರದಿ ಕಳುಹಿಸಿ. ಆಮೇಲೆ ನಿಮ್ಮನ್ನು ನೇಮಿಸಿಕೊಳ್ಳುವ ಬಗ್ಗೆ ನಿರ್ದಯವಾಗಿ ಯೋಚಿಸಲಾಗುವುದು.

    ಗಿಂಬಳಕ್ಕೆ ಹೋಲಿಸಿದರೆ ಸಂಬಳ ಕಡಿಮೆ ಎನಿಸದು.

    ಪ್ರತ್ಯುತ್ತರಅಳಿಸಿ
  5. ನೀವು ಹೇಳಿದಂತೆಯೇ ಆಗುವುದಾದರೆ, ಇದೀಗ ಮುಂದಿನ ವಿಮಾನದಲ್ಲಿ ನನ್ನ ಅರ್ಜಿಯನ್ನು ಕಳುಹಿಸುತ್ತಿರುವೆ. ಅದು ಸ್ವಲ್ಪ ಭಾರವಾಗಿರುತ್ತದೆ. ಬಾಂಬ್ ಎಂದು ಬಿಸಾಕಬೇಡಿ.

    ನನಗೆ ಸಂಬಳವಿಲ್ಲದಿದ್ದರೂ ಪರವಾಗಿಲ್ಲ ಸಿಂಬಳ ಅಯ್ಯೋ ಥುತ್ ಗಿಂಬಳ ಸಿಕ್ಕರೆ ಸಾಕು.

    ಪ್ರತ್ಯುತ್ತರಅಳಿಸಿ
  6. ಬೊಗಳೆಯವರೆ, ನೀವು ಕೊಟ್ಟಿರುವ ಮೊದಲ ಲಿಂಕ್ ಓಪನ್ ಆಗಲಿಲ್ಲ. ವಿಧಾನಸೌಧದ ಕಂಬಗಳೆಲ್ಲ ಲಂಚ ಕೇಳೋ ತರ ನೀವು ಕೊಡೋ ಲಿಂಕುಗಳೆಲ್ಲ ಲಂಚ ಕೇಳ್ತಿವೆಯಲ್ಲ!

    ಪ್ರತ್ಯುತ್ತರಅಳಿಸಿ
  7. "no sleeping" ಬೋರ್ಡ್ ಹಾಕಿಬಿಟ್ಟರೆ ಹೀರೋಯಿನ್
    ತನ್ನ ಕುತ್ತಿಗೇನ hero ಭುಜದ and vice versa ಲಾಂಗ್ ರೂಟ್ ಬಸ್ಸಲ್ಲಿ ಹೇಗೆ ಜಾರಿಸೋದು ಅಂತಾ ಕನ್ನಡ /ತೆಲುಗು/ತಮಿಳು/ಹಿಂದಿ ಚಿತ್ರ ನಿರ್ಮಾಪಕರಿಗೆಲ್ಲಾ ಚಿಂತೆಯಾಗಿದೆಯಂತೆ ಹೌದಾ?
    ನಿಮ್ಮ ರಗಳೆ ಬ್ಯೂರೊ ದಿಂದ ನಮ್ಮ "ಚಿತ್ರ-ದುರ್ಗ" ಕ್ಕೆ ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  8. ಲಿಂಕ್ ಎನ್ನುವುದು ಕೊಂಡಿ ಆಗಿರುವುದರಿಂದ ಅದು ಕೊಡಿ ಕೊಡಿ ಅಂತ ಕೇಳ್ತಿರಬಹುದು ಶ್ರೀ ತ್ರೀ ಅವರೆ. ಏನೋ ತೊಂದರೆಯಾಗಿದೇಂತ ಕಾಣ್ಸುತ್ತೆ.

    ಸರಿಪಡಿಸಲು ಹತಾಶ ಯತ್ನ ನಡೆಸಲಾಗುತ್ತಿದೆ.
    ಈ ಪ್ರಯತ್ನ ಫಲ ನೀಡಿದ್ದು, ನಿಜವಾದ ಲಿಂಕ್ ಇಲ್ಲಿದೆ.

    ಪ್ರತ್ಯುತ್ತರಅಳಿಸಿ
  9. ಮಾಲಾ ಅವರೆ,
    ಭುಜರಂಗು ಬಲಿಯಾಗುವುದಕ್ಕಾಗಿಯೇ ಈ ಯುವತಿ ಕಾಯುತ್ತಾ ನಿದ್ದೆ ಹೋಗಿರುವುದು ಎಂಬುದು ಎಲ್ಲಿಯೂ ಪ್ರಕಟವಾಗದ ವರದಿ.

    ನಮ್ಮ ಬ್ಯುರೋದಿಂದ ಚಿತ್ರದುರ್ಗಕ್ಕೆ ನೇರ ಸಂಚಾರ ವ್ಯವಸ್ಥೆ ರೂಪಿಸಿರುವುದು ಉಭಯ ದೇಶಗಳ ಮಧ್ಯೆ ಶಾಂತಿ ಸ್ಥಾಪಿಸುವ ಯತ್ನದ ಒಂದು ಭಾಗ ಎಂದು ಘೋಷಿಸಲಾಗುತ್ತದೆ.

    ಮಾನ್ಯ ನಿಧಾನಮಂತ್ರಿಯವರು ಈ ಸಂಪರ್ಕ ವ್ಯವಸ್ಥೆಗೆ ಚಾಲನೆ ಕೊಟ್ಟಿದ್ದಾರೆ.

    ಪ್ರತ್ಯುತ್ತರಅಳಿಸಿ
  10. ಮಾವಿನ ರಸದವರೆ,
    ನೀವು ಸಂಬಳಕ್ಕಿಂತಲೂ ಗಿಂಬಳವೇ ಹೆಚ್ಚು ಸಿಗುತ್ತೆ ಅಂತ ಹೇಳಿ ನಮ್ಮ ಬ್ಯುರೋದ ಮರ್ಯಾದೆ ನಾಲ್ಕಾಬಟ್ಟೆ ಮಾಡ್ತಿದೀರಲ್ಲಾ... :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D