(ಬೊಗಳೂರು ಬಾಂಬ್ ಬ್ಯುರೋದಿಂದ)
ಬೊಗಳೂರು, ಆ.26- ಶಕ್ತಿಶಾಲಿ ಆತ್ಮಹತ್ಯಾ ಬಾಂಬ್ ಮೂಲಕ ಕರ್-ನಾಟಕ ಸರಕಾರ ಉರುಳಿಸುವ ಸಿಡಿಮಿಡಿ "ರೆಡ್ಡಿ ಸಿಡಿ" ಬಿಡುಗಡೆ ಕಾರ್ಯಕ್ರಮದ ವರದಿಯಿದು.
 
ಇಡೀ ಬೊಗಳೂರಿಗೆ ಬೊಗಳೂರೇ ಕರಾಳ ಛಾಯೆಯಿಂದ ಆವೃತವಾಗಿತ್ತು. ನಗರದ ಪ್ರಮುಖ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ಬಸ್ ನಿಲ್ದಾಣಗಳಲ್ಲಿ, ಹಾದಿ ಬೀದಿಗಳಲ್ಲಿ ಜನ ಸಂಚಾರ ವಿರಳವಾಗಿದ್ದರೆ, ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸಂಖ್ಯೆಯೇ ವಿರಳವಾಗಿತ್ತು.
 
ಏನಾಯಿ ಥೂ? ಇವರೆಲ್ಲಾ ಎಲ್ಲಿ ಹೋದ್ರು? ಎಂದು ಕೊಂಡು ಪತ್ತೆಗೆ ಹೊರಟಾಗ, ಫೈಲುಗಳನ್ನು ನೋಡಬೇಕಿದ್ದ ಸರಕಾರಿ ನೌಕರರು ಟಿವಿ ನೋಡುತ್ತಿದ್ದರು. ಅವರಿಗೂ ಅದೇ.... ಸಿಡಿ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸುವ ತರಾತುರಿ.
 
ಅಮೋಘ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಪತ್ರಿಕೆ ಮತ್ತು ದೂರದರ್ಶನ ಮಾಧ್ಯಮಗಳ ಮೂಲಕ ಸರ್ವರಿಗೂ ಆದರದ ಆಮಂತ್ರಣ ನೀಡಲಾಗಿತ್ತು.
 
ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಕರ್-ನಾಟಕ ಸರಕಾರವನ್ನು ಉರುಳಿಸಲಿರುವ ಆತ್ಮಹತ್ಯಾ ಬಾಂಬ್ ಸ್ಫೋಟಕ್ಕೆ ಕಾತರವಾಗಿರುವಷ್ಟರಲ್ಲಿ.... ರೆಡ್ಡಿ ಅವರ ಸಿಡಿ..... ಪುಡಿ ಪುಡಿಯಾಗಿ ಹೊರಬಿದ್ದಿತ್ತು.
 
ಉಸಿರು ಬಿಗಿ ಹಿಡಿದಿದ್ದವರೆಲ್ಲರೂ ಜೋರಾಗಿ ಉಸಿರು ಹೊರಬಿಟ್ಟ ಕಾರಣ ಅದರ ವೇಗಕ್ಕೆ ರೆಡ್ಡಿ ಈಗ ಬಲವಂತವಾಗಿ ಮೂಲೆಗೆ ತಳ್ಳಲ್ಪಟ್ಟಿದ್ದಾರೆ.
 
ಆದರೆ ಈ ಕುರಿತು ಜನರನ್ನ ತನ್ನತ್ತ ಸೆಳೆದ ಜನಾರ್ದನ ರೆಡ್ಡಿ ಏನು ಹೇಳುತ್ತಾರೆ?
 
ನೋಡಿ ಸ್ವಾಮಿ... ಇಡೀ ದೇಶವೇ ನನ್ನನ್ನೊಬ್ಬ ಹೀರೋನಂತೆ ಕಾಣಲಿಲ್ಲವೇ? ಸರಕಾರ ಉರುಳಿತೋ... ಬಿಟ್ಟಿತೋ... ಅಂತ ನನಗೆ ಚಿಂತೆಯಿಲ್ಲ... ಆದರೆ ನನ್ನನ್ನಂತೂ ಎಲ್ಲಾ ಟಿವಿ ಮಾಧ್ಯಮಗಳು, ಪತ್ರಿಕೆಗಳು ಇಂಟರ್ನೆಟ್ ತಾಣಗಳು ಮುಖಪುಟದಲ್ಲಿ ಛಾಪಿಸಿ ಹೂಹಾರ ಹಾಕುವ ಮಟ್ಟಿಗೆ ನಾನು ಖ್ಯಾತಿ ಪಡೆಯಲಿಲ್ಲವೇ? ಎಂದು ಸಂದರ್ಶಕರಿಗೇ ಪ್ರತಿ ಸವಾಲು.
 
ಮಾತ್ರವಲ್ಲ... ಅಷ್ಟು ಹೊತ್ತು ಎಲ್ಲರನ್ನೂ ಕಾಯಿಸಿದ್ದೇನೆ... ಪುರುಸೊತ್ತಿಲ್ಲದಿದ್ದರೂ ಪುರುಸೊತ್ತು ಮಾಡಿಕೊಂಡು ದೇಶದ ಜನರೆಲ್ಲಾ ಸ್ವಲ್ಪ ಹೊತ್ತು ತಮ್ಮ ಉಸಿರು ಕಟ್ಟಿಕೊಂಡು ಕೂತಿರಲಿಲ್ಲವೇ? ಇದರಿಂದ ಅವರಿಗೇ ತಿಳಿಯದಂತೆ ಪ್ರಾಣಾಯಾಮ ಮಾಡಿಕೊಂಡು ಅಷ್ಟು ಸಮಯದ ತಮ್ಮ ಆಯುಷ್ಯವನ್ನು, ಆರೋಗ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತನ್ನೂ ಉದುರಿಸಿದರು.
 
ಶೀಘ್ರದಲ್ಲೇ ಮತ್ತೊಂದು ಸಿಡಿ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಘೋಷಿಸಿದಾಗ ಬೊಗಳೆ ರಗಳೆ ಬ್ಯುರೋ... "ದಯವಿಟ್ಟು ಬೇಡ" ಎಂದು ಮನಸ್ಸಿನಲ್ಲೇ ಘರ್ಜಿಸಿ ಅಲ್ಲಿಂದ ಹೊರ ನಡೆಯಿತು.

6 Comments

ಏನಾದ್ರೂ ಹೇಳ್ರಪಾ :-D

 1. ಈ ಸಿಡಿ ಬಗ್ಗೆ ಹೇಳಿದ್ರೆ ಯಾಕೆ ಜನ ಸಿಡಿಮಿಡಿಗೊಳ್ತಾರೆ.
  ಜೀತು ಅವರಿಗೂ ಸಿಡಿ ಸಿಗ್ತಿರ್ಲಿಲ್ವಂತೆ. ಅದಕ್ಕೇ ಈ ಕಡೆ ಬರ್ಲಿಲ್ವಂತೆ. ನನ್ನ ಹತ್ರಾನೂ ಸಿಡಿ ಇಲ್ಲ. ಹಾಗಿದ್ರೆ ನಾನೂ ಇಲ್ಲಿಗೆ ಬರಬಾರದಾ?

  ReplyDelete
 2. ಮಾವಿನರಸರೆ
  ನೀವು ಎಕ್ಸ್-ಪಿ ಸಿಡಿ ಹುಡುಕೋದು ಕೇಳಿದ್ರೆ... ನನಗೆ ಯಾಕೆ ಡೌಟು ಬರಬೇಕು? :)

  ಆ ಸಿಡಿ XXX ಅಂತ ತಿಳ್ಕೊಂಡಿಲ್ಲ ತಾನೇ?
  ಅದೇನೋ ಎಕ್ಸ್-ಪ್ರೈಮ್ ಮಿನಿಸ್ಟರ್ ಗೌಡ್ರ ಗದ್ಲವಂತೆ.
  ಅದ್ಕೇ ಜೀತು ಎಕ್ಸ್-ಪಿ ಹುಡುಕ್ತಾ ಇದ್ದಾರೆ.

  ReplyDelete
 3. ಸಿಡಿ ಸಿಡಿಯೆಂದು ಯಾಕೇ ಕನವರಿಸುವಿರಿ
  ಆ ಸಿಡಿಯಲ್ಲಿ ಎನೀದೆ ಆ ಪರಿ
  ನೋಡಲೇಬೇಕೆಂದಿದ್ದರೆ ಸಿಡಿ
  ನೋಡಿರಿ ಯಾವುದಾದರೂ ಮಲ್ಲಿಕಾ ಸಿಡಿ !

  ReplyDelete
 4. ಶಿವ್ ಅವರೆ,
  ನಿಮ್ಮ ಬಳಿ ಇದ್ದರೆ ಸಿಡಿ
  ಅದನ್ನು ಇತ್ತ ಕೊಡಿ...

  ReplyDelete
 5. cD cD cD yeMdu baDidaduvekayya
  cD yalli ahudenu iruvudenu ballira ballira..??

  AsatyanveshigaLe nimage ellavoo astyaane kaNtide ansutte.Satyavagloo heLi neevu ide cD taane huDukta irodu??
  illa AA,BB...MM anta yavudadroooo...

  ReplyDelete
 6. ಮಾನ್ಯ ಮ್ಯಾನೇಜಿಂಗ್ ಡೈರೆಕ್ಟರ್ ಅವರೆ,
  ಬ್ಲಾಗಿಗೆ ಸ್ವಾಗತ...

  ಆದ್ರೆ ನೀವು ಸಿಡಿಯ ಪಟ್ಟಿ ನೋಡಿ ಸಿಡಿಮಿಡಿಯಾಗಿದೆ.
  ಆ ಸಿಡಿಗಳನ್ನು ಸ್ವಲ್ಪ ಬಿಡಿ ಬಿಡಿಯಾಗಿ ಬಿಡಿಸಿಡಬಾರದೆ?

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post