Subscribe Us

ಜಾಹೀರಾತು
header ads

ಸಾನಿಯಾ ಹಿಂದೆ ಯಾರೂ ಇಲ್ಲವೇ?

(ಬೊಗಳೂರು ಟೀನೇಜ್ ಬ್ಯುರೋದಿಂದ)
ಬೊಗಳೂರು, ಜು.27- ಭಾರತದ ಟೆನಿಸ್ ರಂಗಕ್ಕೆ ಸಿನಿಮಾದ ಆಕರ್ಷಣೆ ತಂದುಕೊಟ್ಟಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಟೀನೇಜ್ ಸೆನ್ಸೇಷನ್ ಸಾನಿಯಾ ಮಿರ್ಜಾಳ ಹಿಂದೆ ಯಾರೂ ಬಿದ್ದಿಲ್ಲ ಎಂದು ಮತ್ತೊಬ್ಬ ಟೆನಿಸ್ ಆಟಗಾರ ಮಹೇಶ ಭೂಪಪತಿ ಅಪ್ಪಟ ಸುಳ್ಳು ಹೇಳಿದ್ದಾರೆಂಬುದು ಬೊ.ರ.ಬ್ಯುರೋದಿಂದ ಬಯಲಾಗಿದೆ.

ಸಾನಿಯಾ ಹಿಂದೆ ಯಾರೂ ಇಲ್ಲ ಎಂಬುದು ಅಪ್ಪಟ ಸುಳ್ಳು ಎಂಬ ನಮ್ಮ ವಾದಕ್ಕೆ ಸಾನಿಯಾ ಹೆಸರಲ್ಲಿ ನಿರ್ಮಾಣಗೊಂಡಿರುವ ವೆಬ್ ಸೈಟುಗಳೇ ಸಾಕ್ಷಿ. ಮಾತ್ರವಲ್ಲದೆ ಯಾವುದೇ ಪತ್ರಿಕೆಗಳ ಮುಖಪುಟದಲ್ಲಾಗಲೀ, ಒಳಪುಟಗಳಲ್ಲಾಗಲಿ ಆಕೆ ಗೆಲ್ಲಲಿ, ಸೋಲಲಿ, (ವಿಶ್ವ ಟೆನಿಸ್ ಶ್ರೇಯಾಂಕಪಟ್ಟಿಯಲ್ಲಿ) ಏಳಲಿ, ಬೀಳಲಿ ಒಂದಾದರೂ ಭಾವ ಚಿತ್ರ ಇದ್ದೇ ಇರುತ್ತದೆ ಎಂಬ ಉಗ್ರ -ವಾದವೇ ಸಾಕ್ಷಿ.

ಭಾರತದ ಯುವಜನತೆಯಲ್ಲಿ ಹೆಚ್ಚಿನವರು ಆಕೆಯ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಆಕೆಯ ಅಭಿಮಾನಿಗಳು ಹುಟ್ಟುಹಾಕಿರುವ ಹಲವಾರು ವೆಬ್ ಸೈಟುಗಳೇ ಸಾಕ್ಷಿ. ಅದರಲ್ಲಿ ಒಂದು ಸಾನಿಯಾ ಫ್ಯಾನುಗಳದು, ಇನ್ನೊಂದು ಅನಧಿಕೃತ ಫ್ಯಾನುಗಳದು, ಮಗದೊಂದು ಭಾರತೀಯ ಟೆನಿಸ್ ದೇವತೆಯದು, ಇನ್ನೊಂದು ಸಾನಿಯಾ-ಮೇನಿಯಾದ್ದು.

ಸಾನಿಯಾಳ ಕೀರ್ತಿ ಪತಾಕೆ ಎತ್ತರೆತ್ತರಕ್ಕೆ ಏರುತ್ತಿರುವಂತೆಯೇ ಸಾನಿಯಾ ಸಮುದಾಯದ ಮುಖ್ಯಸ್ಥರ ಹುಬ್ಬುಗಳೂ ಎತ್ತರೆತ್ತರಕ್ಕೆ ಏರಿದವು. ಇದಕ್ಕೆ ಆಕೆ ಧರಿಸುವ ದಿರಿಸು ಕೂಡ ಎತ್ತರೆತ್ತರಕ್ಕೆ ಹಾರುವುದೇ ಕಾರಣವಾಗಿತ್ತು. ಕೊನೆಗೆ ಸಾನಿಯಾ ಡ್ರೆಸ್ ಧರಿಸುವುದರ ವಿರುದ್ಧವೇ..... ಅಲ್ಲಲ್ಲ... ಕ್ಷಮಿಸಿ.... ಸಾನಿಯಾ ಡ್ರೆಸ್ ಧರಿಸುವ ರೀತಿಯ ವಿರುದ್ಧ ಫತ್ವಾ ಹೊರಡಿಸಲಾಯಿತು.

ಮತ್ತೊಂದು ದಿನ, ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ ಎಂಬ, ತಮಿಳುನಾಡಿನಲ್ಲಿ ಅಕ್ಷರಶಃ ಆರಾಧ್ಯ ದೈವ ಆಗಿದ್ದ ಖುಷ್ಬೂಗೆ ಸಾನಿಯಾ ಬೆಂಬಲ ನೀಡಿದ್ದು ವರದಿಯಾಯಿತು. ದೇಶಾದ್ಯಂತ ಎಲ್ಲರ ಹುಬ್ಬುಗಳು ಮತ್ತೊಮ್ಮೆ ಮೇಲೇರಿದಾಗ ಇಲ್ಲ, ಹಾಗೆ ಹೇಳಿಲ್ಲ ಎಂಬ ಸ್ಪಷ್ಟನೆಯೂ ಬಂತು.

ಇಂಥ ಕ್ಯೂಟ್ ಸಾನಿಯಾ ಹಿಂದೆ ಯಾರೂ ಬಿದ್ದಿಲ್ಲ ಎಂಬುದು ಅಕ್ಷರಶಃ ಸುಳ್ಳು. ಸಾನಿಯಾ ಹಿಂದೆ ಯುವಕರು ಬಿದ್ದಿದ್ದಾರೆ, ಆಕೆ ಹೋದಲ್ಲೆಲ್ಲಾ ಇ-ಮೈಲ್, ಎಸ್ಎಂಎಸ್ ಸಂದೇಶಗಳು ಜತೆಗಿರುತ್ತವೆ, ಆಕೆಯ ಹಿಂದೆ ಅಭಿಮಾನಿಗಳ ಪಡೆ ಬಿದ್ದಿದೆ, ಧಾರ್ಮಿಕ ಮುಖಂಡರೂ ಬಿದ್ದಿದ್ದಾರೆ, ಸಾನಿಯಾ ಆಡುತ್ತಿರುವ ಆಟವಾದ ಟೆನಿಸ್ ಕೂಡ ಆಕೆಯ ಹಿಂದಿದೆ.

ಕೊಟ್ಟ ಕೊನೆಯದಾಗಿ, ಸಾನಿಯಾಳೇ ಆಡುತ್ತಿರುವ ಟೆನಿಸ್‌ನಿಂದ ತಾನು ಬಳಲುತ್ತಿದ್ದೇನೆ ಎಂದು ವಿಶ್ವಮಾನ್ಯ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಕೂಡ ಬಾಯಿಬಿಟ್ಟಿದ್ದಾರೆ, ಅದಕ್ಕೆ ತಕ್ಕ ಶಾಸ್ತಿಯನ್ನೂ ಮಾಡಿಕೊಂಡಿದ್ದಾರೆ.

ಇನ್ನೂ ಒಂದು ವಿಷಯ ಬಾಕಿ ಉಳಿದಿದೆ. ಸಾನಿಯಾ ಹಿಂದೆ ಬೊ.ರ. ಬ್ಯುರೋ ಕೂಡ ಬಿದ್ದಿದೆ, ಬೊ.ರ. ಓದುಗರೂ ಬಿದ್ದಿಲ್ಲ ಅಂತ ಏನು ಗ್ಯಾರಂಟಿ? ಎಂದು ನಾವು ಶೀಘ್ರವೇ ಪ್ರಶ್ನೆ ಕೇಳಲಿದ್ದೇವೆ ಅನ್ನೋ ಮಾಹಿತಿ ನಮಗೇ ಸಿಕ್ಕಿದೆ!

ಸೂಚನೆ: ನೆಟ್ಟೊದೆತಗಳು 7000 ಅಂತ ನಮಗೇ ಗೊತ್ತಿಲ್ಲದೆ ತೋರಿಸಿದ್ದರಿಂದಾಗಿ ಹತಾಶೆಯಿಂದ ಈ ಟೀನೇಜ್ ಸುದ್ದಿ.

Post a Comment

19 Comments

 1. ಆಸತ್ಯಿಗಳೇ,
  ನೀವು ಮೊನ್ನೆ ಚನೈನಲ್ಲಿ ATP tournamentನಲ್ಲಿ ಸಾನಿಯಾಳನ್ನು ಸ್ಸಾರಿ ಸಾನಿಯಾಳ ಆಟವನ್ನು ಚಪ್ಪರಿಸಿಕೊಂಡು ನೊಡ್ತಾ ಇದ್ದೀರಿ ಅಂತ ಕೇಳಿದೆ.
  tennis elbow ಮುಂಬಯಿಗೆ ತಲುಪಿದ ಹಿಂದೆ ತವಿಶ್ರೀಗಳ ಕೈವಾಡವಿದಯೇ?
  ನಿಮ್ಮ ಲೇಖನದಲ್ಲಿ ಕೂಡ ಅವಳ ಭರ್ಜರಿ poseನ್ನು ಹಾಕಿರುವ ಹಿಂದಿನ ರಹಸ್ಯವೇನು?

  ReplyDelete
 2. ಮಹಾನ್ ಅವರೆ,
  ಚೆನ್ನೈಯಲ್ಲಿ ಚೆನ್ನಾಗಿಯೇ ನಿಮ್ಮ ಪಕ್ಕದಲ್ಲೇ ಕುಳಿತು ನಾನು ಆಟ ನೋಡಿದ್ನಲ್ಲಾ... ಅಬ್ಬಾ, ಅಂತೂ ನೀವದನ್ನು ಮರೆಯಲಿಲ್ವಲ್ಲಾ... ಅಷ್ಟು ಸಾಕು...

  ಸಚಿನ್ ಟೆನಿಸ್ ಎಲ್ಬೋ ಅಂತ ಕಾರಣ ಹೇಳಿರುವುದರ ಹಿಂದೆ ಕಾರಣ ಅನ್ವೇಷಿಸಲಾಗುತ್ತದೆ.

  ಮತ್ತೆ pose ವಿಷಯ. ಎಷ್ಟೇ ಸರ್ಚ್ ಮಾಡಿದರೂ ಅದೊಂದೇ ಫೋಟೋ ಸಿಗುವುದು....!!!!!

  ReplyDelete
 3. ಶಾಂತಮ್ಮ ಪಾಪಮ್ಮ - ನಿಮ್ಮಿಬ್ಬರ ಹುಡುಗಾಟಿಕೆ ಮಧ್ಯೆ ಮುದುಕನನ್ನು ಯಾಕ್ ತರ್ತೀರ್ರಪ್ಪಾ! ನೀವಿಬ್ರೂ ಏನೋ ನೋಡಿದ್ರಿ - ಮತ್ತಿನ್ನೇನನ್ನೋ ನೋಡಿದ್ರಿ - ಹೋಗ್ಲಿ ಬಿಡಿ ನಾ ಹೇಳಾಕಿಲ್ಲ. ಸಚಿನ್ - ಸಾನಿಯಾರ ಕ್ರೆನ್ನಿಸ್ ಎಲ್ಬೋ ಬಗ್ಗೆ ಅಂಜಲಿಯನ್ನು ಕೇಳಿ - ಪ್ರಥಮ ಮಾಹಿತಿ ಸಿಗುತ್ತದೆ. ಅಂದ ಹಾಗೆ ಈ ವರ್ಷದ ಸುಳ್ಳು ಮಾಹಿತಿಗಾರ ಎಂಬ ಪ್ರಶಸ್ತಿಯನ್ನು ಕವಿ ಹೃದಯಿ ಅಸತ್ತೆಯವರಿಗೆ ಅಡುಗೆಮನೆಯಲ್ಲಿ ಇಂದು ಸಂಜೆ ನೀಡಲಾಗುತ್ತಿದೆ.

  ಅಸತ್ಯರೇ ಈ ಪ್ರಶಸ್ತಿಗೆ ನಿಮ್ಮೊಬ್ಬರನ್ನೇ ನಾಮಕರಣ ಮಾಡಿದ್ದಕ್ಕೆ ನನ್ನ ಪಾಲು ಕೊಡುವುದನ್ನು ಮರೆಯಬೇಡಿ. ये छॊटू एक पॆटी इधर भेजो.

  ReplyDelete
 4. ಮಾವಿನಯಸರೇ,
  ನಿಮ್ಮನ್ನು ನಾವು ಎಳೆದುತರಲಿಲ್ಲ ಎಂದು ಸ್ಪಷ್ಟವಾಗಿ, ಖಡಾಖಂಡಿತವಾಗಿ ಸ್ಪಷ್ಟಪಡಿಸುತ್ತಿದ್ದೇವೆ. ನೀವೇ ಆವತ್ತು ಚೆನ್ನೈಗೆ ಹೋಗಿದ್ರಲ್ಲಾ?
  ದೂರು ಮಾಡುವರೇನೇ? ಕೃಷ್ಣಯ್ಯನಾ.... ಅಂತ ದಾಸರು ಹಾಡಿದ್ದು ಬಹುಶಃ ಇದೇ ಪ್ರಸಂಗಕ್ಕೆ ಇರಬೇಕು.

  ಕಪಿ ಹೃದಯದ ಪ್ರಶಸ್ತಿಯೇ?
  छोटा राजन को बुलाएंगे क्या?

  ReplyDelete
 5. 7000 ನೆಟ್ಟೊದೆತ ತಿಂದು ಇನ್ನೂ ಟೀನೇಜಾ? ಮುದುಕಿ ಮೈನೆರೆದ ಹಾಗಾ? ಧನ್ಯವಾದಗಳು.

  ಬಹಳ ಬೇಗ 10,000 ಒದೆತಗಳು ಸಿಗಲಿ ಎಂಬ ನಿರೀಕ್ಷೆಯಲ್ಲಿರುವೆ

  ReplyDelete
 6. ಹುಣಸೆ ಮುಪ್ಪಾದರೇ ಹುಳಿ ಮುಪ್ಪೇ??? ಅಂತ ಅಸತ್ಯಿಗಳು ಎನೋ ಪಿಸಗುಟ್ಟತ್ತಾ ಇದಾರೆ.

  ಪ್ರಶಸ್ತಿನಾ?? ಪ್ರಶಸ್ತಿನಾ?? ಇದಕ್ಕೂ ಛೋಟಾನಿಗೂ ಏನು ಸಂಬಂಧ???

  ReplyDelete
 7. ಮಾವಿನ ಅರಸರೆ,
  ನಿಮ್ಮ ನಿರೀಕ್ಷೆಯಿಂದ ಭಯವಾದರೂ ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮ ಎಷ್ಟು ಒದೆ ಬೀಳಲಿದೆಯೋ....!!!!!

  ReplyDelete
 8. ಸೋನಿಯಾ ಹಿಂದೆಯೇ ಇಷ್ಟೊಂದು ಮಂದಿ ಬಾಲಬಡುಕರು (ಬಾಲ ಇಲ್ಲದ ಬಡ ಕರು?) ಇದ್ದಾರೆಂದ ಮೇಲೆ ಸಾನಿಯಾಳ ಹಿಂದೆ ಯಾರೂ ಇಲ್ಲ ಎಂದರೆ ನಂಬುತ್ತಾರೆಯೇ? ಎಲ್ಲರೂ ಸೊ ನಿಯರ್ ಟು ಸಾ ನಿಯಾ.

  ಅಂದಹಾಗೆ ಅಡುಗೆಮನೆಯಲ್ಲಿ ಪ್ರಶಸ್ತಿಪ್ರದಾನ ಸಮಾರಂಭದ ಸುದ್ದಿಕೇಳಿ ಅಲ್ಲೆಲ್ಲೊ ಲಟ್ಟಣಿಗೆಯೊಂದು ಅಡಗಿಕುಳಿತು ಮುಸಿಮುಸಿನಗುತ್ತಿದೆಯಂತೆ. ಪ್ರಶಸ್ತಿಪ್ರದಾನವಿದ್ದುದು ಪ್ರ'ಶಾಸ್ತಿ'ಪ್ರದಾನವಾಗಿಸಲು ತನ್ನ (ಲಟ್ಟಣಿಗೆಯ) ಭೂಮಿಕೆ ಅತಿಮುಖ್ಯವಾದುದು ಎಂದು ಬೀಗುತ್ತಿದೆಯಂತೆ!

  ReplyDelete
 9. ಜೋಷಿಯವರೆ,

  ಸೂಕ್ತ ಸಮಯದಲ್ಲಿ ಎಚ್ಚರಿಸಿದ್ದಕ್ಕೆ ಥ್ಯಾಂಕ್ಸ್‌. ಈಗ ಈ ಥ್ಯಾಂಕ್ಸ್‌ಗಳಲ್ಲಿ ಒಂದನ್ನು ಮಾತ್ರ ಈಗ ತೆಗೆದುಕೊಳ್ಳಿ. ಮತ್ತೆರಡು ಮಲಗಿದ ಮೇಲೆ, ಇನ್ನೆರಡು ಏಳುವ ಮೊದಲು.

  ಮಾವಿನರಸರು ಆಗ್ಲೇ ಅಸತ್ತೆಗೆ ಲತ್ತೆ ಕೊಡಲು ಲಟ್ಟಣಿಗೆ ಮೊರೆ ಹೋಗಿದ್ದಾರಲ್ಲ...

  ReplyDelete
 10. ಅಡುಗೆ ಮನೆಯಲ್ಲಿ ಪರಾಠದ ಭರಾಟೆ ನಡೆದಿದೆಯಂತೆ. ಲಟ್ಟಣಿಗೆಗೆ ಚೆನ್ನಾಗಿ ಎಣ್ಣೆ ಸವರಿರುವುದರಿಂದ ಹೆಚ್ಚಿನ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ. ಈ ಪ್ರಶಸ್ತಿ ಸಮಾರಂಭದಲ್ಲಿ ಸ್ವತ: ಸಾನಿಯಾರವರೇ ಎಲುಬಿನ ದಾನ ಮಾಡುತ್ತಿದ್ದಾರಂತೆ. ಚಪ್ಪಾಳೆ ತಟ್ಟಲು ವಿಶೇಷವಾಗಿ ಟೆನಿಸ್ ದಿರಿಸಿನಲ್ಲಿ ಸಚಿನ್ ಮತ್ತು ಅಂಜಲಿಯವರನ್ನು ಕರೆಸುತ್ತಿದ್ದಾರಂತೆ. ಇದೊಂದು ಸುವರ್ಣಾವಕಾಶ ಕಳೆದುಕೊಳ್ಲಬೇಡಿ. ಕಳೆದುಕೊಂಡು ನಿರಾಶರಾಗಬೇಡಿ.

  ReplyDelete
 11. ಸಾನಿಯಾಳ ಹಿಂದೆ ಬೀಳಲು ಚೋಟು ಉದ್ದದ ಲಂಗ ಕಾರಣವೋ ಅಥವಾ ಯಾವು ಭಾರತೀಯ ಹೆಣ್ಮಕಳು ಏರದಿರುವ ಎತ್ತರ ಕಾರಣವೋ..

  ಅಸತ್ಯಿಗಳಿಗೆ ಕೇಳಿದರೆ ಏನೂ ಉಪಯೋಗವಿಲ್ಲ ಬಿಡಿ..ಅವರು ಮಹಾನ್-ತೇಶ್ ಜೊತೆ ಇನ್ನೂ ಏನೋ ನೆನಸಕೊಂಡು ಬಾಯಿ ಚಪ್ಪರಿಸುತ್ತಾ ಇದ್ದಾರೆ..

  ತವಿಶ್ರೀಗಳೇ..
  ಅಡುಗೆ ಮನೆಯಲ್ಲಿ ಅಸತ್ಯಿಗಳಿಗೆ ನಡೆವ ಸನ್ಮಾನ ಕಾರ್ಯಕ್ರಮವನ್ನು ಯಾವ ಚಾನೆಲ್‍ನಲ್ಲಿ ಲೈವ್ ಆಗಿ ತೋರಿಸುತ್ತಾರೆ?

  ಜೋಷಿಗಳು ತಮ್ಮ ಆಗಾಧ ಅನುಭವದಿಂದ ಲಟ್ಟಣಿಕೆ ಬಗ್ಗೆ ಕಾಮೆಂಟಿಸಿದ ಹಾಗೀದೆ!!

  ReplyDelete
 12. ಅನ್ವೇಷಿ ಎಲ್ಲರನ್ನೂ ಹಿಡಿದು ಹಿಡಿದು ಎಳೆದು ಸಾನಿಯಾ ಹಿಂದೆ ಹಾಕುತ್ತಿರುವುದನ್ನು ನೋಡಿದರೆ ಅವರೂ ಹಿಂದುಳಿದ ಜನಾಂಗವೇ ಅನ್ನಿಸುತ್ತೆ.

  ಸಾಕ್ಷೀ ಕೊಟ್ಟು... ಹಿಂದೆ ಬೀಳುವುದು ತಪ್ಪು ಅಲ್ಲಾ ಎನ್ನುವುದು ನಿಮ್ಮ ವಾದವೇ?

  ReplyDelete
 13. ಮಾವಿನರಸರೆ,
  ಲಟ್ಟಣಿಗೆಗೆ ಎಣ್ಣೆ ಯಾಕೆ ಹಚ್ಚಿದ್ದು ಅಂತ ನಮಗೆ ಗೊತ್ತಾಗಿದೆ. ಬೀಸಿದ ತಕ್ಷಣ ಕೈಯಿಂದ ಬಿಟ್ಟರೆ ಬಲವಾಗಿಯೇ ಬಡಿಯುತ್ತದೆ ಎಂದಲ್ಲವೇ?

  ReplyDelete
 14. ಶಿವ್ ಅವರೆ,
  ಸಾನಿಯಾ ಹಿಂದೆ ಬೀಳಲು ಚೋಟುದ್ದದ ಲಂಗ ಏರಿರುವ ಎತ್ತರವೇ ಕಾರಣ ಅಂತ ಬಿಡಿಸಿ ಹೇಳೋದು ಬೇಡ ಅನ್ಸುತ್ತೆ...
  ಹ್ಹೆ ಹ್ಹೆ...:)

  ReplyDelete
 15. ಅಪಾನಿಮ್ ಸಿಂಧು ಅವರೆ,
  ಸಾನಿಯಾ-ಸೋನಿಯಾ ಮುಂತಾದವು ಭಾರತದಲ್ಲಿ ಈಗ ಮೇನಿಯಾ ಆಗಿಬಿಟ್ಟಿರೋದ್ರಿಂದ ನಮ್ ದೇಶ ಕೂಡ ಹಿಂದುಳಿದವರನ್ನು ಹಿಂದೆ ತುಳಿಯುತ್ತಿಲ್ಲ, ಮುಂದೆ ತಳ್ಳುತ್ತೇವೆ ಅಂತ ವಿಶ್ವಕ್ಕೇ ತೋರಿಸಿಕೊಡ್ತಿದೇವಲ್ಲ...

  ಆಮೇಲೆ,
  ಸಾಕ್ಷಿ ಯಾರು, ಆಕೆಯನ್ನು ಕೊಟ್ಟದ್ದೇಕೆ ಅಂತ ಹೇಳ್ಲೇ ಇಲ್ಲ....?!!

  ReplyDelete
 16. ಸಾನಿಯಾಳ ಮುಂದೆಯೇ ಅಷ್ಟು ರಸಪೂರಿತವಾಗಿರುವಂತಹ ಚಿತ್ರವನ್ನು ನೀವು ಪ್ರಕಟಿಸಿರುವಾಗ ಅವಳ ಹಿಂದೆ ಯಾರಾದರೂ ಇರುತ್ತಾರೆಯೇ? ಎಲ್ಲರೂ ಮುಂದೆಯೇ ಇರುತ್ತಾರೆ!

  -ಪಬ್

  ReplyDelete
 17. ಆದ್ರೆ, ಪಬ್ಬಿಗರೇ
  ನೀವು ಸಾನಿಯಾ ಹಿಂದೆ ನಿಂತೇ ಕಾಮೆಂಟ್ ಕೊಡ್ತಾ ಇದೀರಿ ಅಂತ ನಮ್ಮ ಬ್ಯುರೋಗೆ ಗೊತ್ತಾಗಿದೆ...
  :)

  ReplyDelete
 18. Here are some links that I believe will be interested

  ReplyDelete
 19. Greets to the webmaster of this wonderful site. Keep working. Thank you.
  »

  ReplyDelete

ಏನಾದ್ರೂ ಹೇಳ್ರಪಾ :-D