ಬೊಗಳೆ ರಗಳೆ

header ads

"ಧೈರ್ಯವಂತ" ಮುಂಬೈಗರೇ ಉಗ್ರರ ಹಿಡೀತಾರೆ: ಮಂತ್ರಿ

(ಬೊಗಳೂರು ಗುಪ್ತ ಬ್ಯುರೋದಿಂದ)
ಬೊಗಳೂರು, ಜು.14- ವಿಶ್ವ ಜನಸಂಖ್ಯಾ (ಸ್ಫೋಟ) ದಿನಾಚರಣೆಯಾದ ಜು.11ರಂದೇ 'ಜನನಿರ್ನಾಮ' ಸ್ಫೋಟ ನಡೆದಿದ್ದರೂ, ಇಂಥ ಭಯಾನಕ, ಆತಂಕ ಭರಿತ ಸನ್ನಿವೇಶಗಳಲ್ಲಿ ಮುಂಬಯಿಗರು (mumbaikars) ಗಟ್ಟಿಗತನ ಪ್ರದರ್ಶಿಸಿದ್ದಾರೆ, ಅವರಿಗೆ ಹ್ಯಾಟ್ಸಾಫ್ ಅಂತ ಮುಂಬಯಿಯಲ್ಲಿ ರೈಲು ಬಾಂಬ್ ಸ್ಫೋಟಿಸಿ ಉಗ್ರರು ಮಾರಣ ಹೋಮ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ Home ಸಚಿವ ಶಿವರಾಜ್ ಪಾಟೀಲ್ ಎಲ್ಲಾ ಮುಂಬಯಿಗರ ಹೊಗಳಿಕೆಗೆ ಪಾತ್ರವಾಗಿದ್ದಾರೆ.
 
ದೇಶದಲ್ಲಿ ಎಲ್ಲಿ ಎಷ್ಟೇ ಅನಾಹುತಗಳಾದರೂ ಎಲ್ಲರೂ ಮುಂಬಯಿಗರ ಧೈರ್ಯ ಸ್ಥೈರ್ಯವನ್ನು ಪ್ರದರ್ಶಿಸಬೇಕು ಎಂದೂ ಕರೆ ನೀಡಿರುವುದರ ಹಿಂದೆ ಹಲವಾರು ಮರ್ಮಗಳು ಅಡಗಿವೆ ಎಂಬುದು ಖಚಿತವಾಗಿದೆ.
 
ಆದರೆ ಸಚಿವರ ಬಾಯಿಂದ ಉದುರದೇ ಹೋದ ಒಂದೆರಡು ಅಂಶಗಳು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಬೊಗಳೆ ರಗಳೆ ಬ್ಯುರೋ ಈ ಅಪ-ವಾದವನ್ನು ಮಂಡಿಸುತ್ತಿದೆ.
 
ಸಚಿವರು ಹೇಳದೇ ಇದ್ದ ವಿಷಯಗಳು ಇಷ್ಟು:
 
"ಮುಂಬಯಿಗರು ಧೈರ್ಯ ಸಾಮರ್ಥ್ಯಗಳಲ್ಲಿ ನಮ್ಮ ಗೃಹ ಇಲಾಖೆಯನ್ನೇ ಮಾತ್ರವಲ್ಲದೆ ಸರಕಾರವನ್ನೂ ನಾಚುವಂತೆ ಮಾಡಿದ್ದಾರೆ. ಈ ಕಾರಣದಿಂದ ಸ್ಫೋಟಕ್ಕೆ ಕಾರಣರಾದ ಉಗ್ರಗಾಮಿಗಳನ್ನು ಕೂಡ ಮುಂಬಯಿಕರ್‌ಗಳೇ ಹಿಡಿದು ನಮ್ಮ ಕೈಗೊಪ್ಪಿಸುತ್ತಾರೆಂಬ ಸಂಪೂರ್ಣ ಭರವಸೆ ನಮಗಿದೆ.
 
ನಮ್ಮ ಗುಪ್ತಚರ ಇಲಾಖೆಗಳೆಲ್ಲವೂ ನಮ್ಮ ವಿರೋಧಿ ಪಕ್ಷಗಳ ಮುಖಂಡರ ಗುಪ್ತ ಕಾರ್ಯಗಳ ಶೋಧನೆಯಲ್ಲಿ ಮಗ್ನವಾಗಿರುವುದರಿಂದ ಅವರಿಗೂ ಪುರುಸೊತ್ತು ಇರುವುದಿಲ್ಲ. ಇಂಥ ಜಾಗೃತ ನಾಗರಿಕರೇ ಇನ್ನು ಮುಂದೆ ಖಾಸಗಿ ಗುಪ್ತಚರ (ಇಂಟೆಲಿಜೆನ್ಸ್) ಪಡೆಯನ್ನು ಇರಿಸಿಕೊಳ್ಳುವರು ಎಂಬುದು ಮುಂಬಯಿಗರ ಧೈರ್ಯ ಸಾಮರ್ಥ್ಯ ನೋಡಿ ನಮಗೆ ಮನದಟ್ಟಾಗಿದೆ.
 
ಈ ಹಿಂದೆ ಮುಂಬಯಿಯಲ್ಲಿ ಭಾರಿ ಪ್ರವಾಹ ಉಂಟಾದಾಗಲೂ ಸ್ವತಃ ಪ್ರಧಾನಿಯವರು ಕೂಡ ಮುಂಬಯಿಗರನ್ನು ಈ ರೀತಿ ಹೊಗಳಿದ್ದಾರೆ. ಈ ಬಾರಿ ನಮ್ಮ ಜತೆಗೆ ಲಾಲು ಪ್ರಸಾದ್ ಕೂಡ ಮುಂಬಯಿಗರ ಧೈರ್ಯವನ್ನು ಹೊಗಳಿದ್ದಾರೆ. ಇನ್ನು ಮುಂದೆಯೂ ಈ ರೀತಿಯಾದಾಗೆಲ್ಲಾ ಮುಂಬಯಿಗರನ್ನು ಹೊಗಳುತ್ತಲೇ ಇರುತ್ತೇವೆ.
 
ಮತ್ತೆ ಈ ದೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆಯೂ ನಮ್ಮ ಹೊಣೆಯಾಗಿದೆ. ಸ್ಫೋಟ ನಡೆದ ದಿನವೇ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಲು ನಮ್ಮ ಮೀಸಲಾತಿ ಮಂತ್ರಿಯನ್ನು ಮೀಸಲಿರಿಸಿದ್ದೇವೆ.
 
ಅದಕ್ಕೂ ಹೆಚ್ಚಾಗಿ, ನಾವು ನಮ್ಮ ಸಚಿವ ಸಂಪುಟವು ನಿನ್ನೆ ಸಭೆ ಸೇರಿ ಸ್ಫೋಟದ ತೀವ್ರತೆಗಿಂತಲೂ ಹೆಚ್ಚು ಬಲವಾಗಿ ಈ ಪ್ರಕರಣವನ್ನು ಖಂಡಿಸಿದ್ದೇವೆ. ಅಷ್ಟು ಬಲವಾಗಿ ಯಾರಿಗಾದರೂ ಖಂಡಿಸಲು ಇದುವರೆಗಾದರೂ ಸಾಧ್ಯವಾಗಿದೆಯೇ? ದೇಶ-ವಿದೇಶಗಳಿಂದ ಖಂಡನೆಗಳ ಮಹಾಪೂರವೇ ಹರಿದು ಬಂದಿವೆ. ಅವನ್ನೆಲ್ಲಾ ಸಂಗ್ರಹಿಸಿ ನಾವು ಬಾಂಬ್ ಸ್ಫೋಟದಲ್ಲಿ ಮಡಿದವರ ಕುಟುಂಬಗಳಿಗೆ ರವಾನಿಸುತ್ತೇವೆ"!

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

 1. ಅ ಸತ್ಯಾನ್ವೇಷಿyavare !!!!!!!

  ಸಚಿವರು ಹೇಳದೇ ಇದ್ದ ವಿಷಯಗಳ bagge telisiddara bagge dhanyawadagalu...


  ಸಚಿವರ egaldaru echchattu enadaru madabahuda annode yakshprasne agibittide?

  ಪ್ರತ್ಯುತ್ತರಅಳಿಸಿ
 2. "ಶಿವರಾಜಪಾಟೀಲ್‍ರಿಗೆ ಅನ್ವೇಷಿಯ ಪಾಟೀ(ಸವಾ)ಲ್!"

  ಜೈ!!

  ಪ್ರತ್ಯುತ್ತರಅಳಿಸಿ
 3. ಮಹಾನ್ ತೇಷ್ ಅವರೇ,
  ಸಚಿವರು, ಮಂತ್ರಿ ಮಹೋದಯರು ಯಾವಾಗಲೂ ಎಚ್ಚೆತ್ತುಕೊಳ್ಳುವುದುಂಟೇ? ಎಚ್ಚೆತ್ತುಕೊಂಡರಾದರೆ ಅವರನ್ನು ಸಚಿವರು ಅಂತ ಕರೆಯಲಾಗುತ್ತದೆಯೇ?

  ಪ್ರತ್ಯುತ್ತರಅಳಿಸಿ
 4. ಜೋಷಿ ಅವರೆ,
  ಇದು ಪಾಟೆ (ತುಳುವಿನಲ್ಲಾದರೆ ಚೊಂಬು, ತಂಬಿಗೆ) ಸವಾಲ್ !

  ಪ್ರತ್ಯುತ್ತರಅಳಿಸಿ
 5. ಅದೇ ಧೈರ್ಯವಂತ ಮುಂಬೈಗರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಇನ್ಮುಂದೆ ಬಾಂಬ್ ಸ್ಪೋಟಕ್ಕಿಂತ ಮುಂಚೆಯೆ ಅದನ್ನು ಕಂಡುಹಿಡಿದು ನಿಷ್ಕ್ರಿಯಗೊಳಿಸುತ್ತಾರೆ ಅಂತಾ ನಮ್ಮ ಹೋಮ್ ಹೇಳಲಿಲ್ಲ..ಅಷ್ಟೇ ಸಾಕು !

  ಪ್ರತ್ಯುತ್ತರಅಳಿಸಿ
 6. ಶಿವ್ ಅವರೆ,
  ಹೋಮ್ ಹೇಳಿದ್ದನ್ನು ನಮ್ಮ ಬ್ಯುರೋ ಇಲ್ಲಿ ಹೇಳಲಿಲ್ಲ ಅನ್ನಿ... ನಾವು ಬೇಕಾದರೆ ಗೂಬೆ ಕೂರಿಸಿಕೊಳ್ಳಲು ಸರ್ವಥಾ ಸಿದ್ಧ !!!!:)

  ಪ್ರತ್ಯುತ್ತರಅಳಿಸಿ
 7. Your site is on top of my favourites - Great work I like it.
  »

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D