ಭಾರತದಲ್ಲೂ ಜಾರಿಗೆ ಜಾತ್ಯಾಧಾರಿತ ರಾಜಕಾರಣಿಗಳ ನಿರ್ಧಾರ
(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಬೊಗಳೂರು, ಜೂ.5- ಹೋಮ್‌ವರ್ಕ್ ಮಾಡದಿದ್ದರೆ ಬ್ಲೂ ಫಿಲಂ ತೋರಿಸುವ ಹೊಸ ಸಂಗತಿ ಬಗ್ಗೆ ತೀವ್ರ ಸಂತಸ ವ್ಯಕ್ತ ಪಡಿಸಿರುವ ಯುವ ವಿದ್ಯಾರ್ಥಿ ಸಮುದಾಯ, ಈ ಜನ್ಮದಲ್ಲಿ ಇನ್ನೆಂದಿಗೂ ಅಪ್ಪಿತಪ್ಪಿಯೂ ಹೋಮ್ ವರ್ಕ್ ಮಾಡುವುದಿಲ್ಲ ಎಂದು ಶಪಥ ಮಾಡಿದೆ.
ಇದುವರೆಗೆ ಹೋಮ್ ವರ್ಕ್ ಮಾಡದಿದ್ದರೆ ಶಿಕ್ಷಕರ ಬೆತ್ತದ ರುಚಿ ಸವಿಯುತ್ತಿದ್ದ ಈ ವಿದ್ಯಾರ್ಥಿ ಬಳಗವು, ಈಗ ತಿಂದದ್ದನ್ನೇ ತಿಂದು ಬೇಜಾರಾಗಿರುವ ಕಾರಣ, ಹೊಸ 'ರುಚಿ'ಯ ಪ್ರಯೋಗದಿಂದ ಆನಂದತುಂದಿಲವಾಗಿದೆ.
Follow ಬೊಗಳೆ-ರಗಳೆ On Facebook and Twitter. ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.
ಈ ಮಧ್ಯೆ, ಸದಾ ಕಾಲ ಹೋಮ್ ವರ್ಕ್ ತಪ್ಪದೆ ಮಾಡಿ ತಂದು ಮಾಸ್ತರರಿಂದ ಪ್ರಶಂಸೆ ಗಿಟ್ಟಿಸುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ಇತ್ತಿತ್ತಲಾಗಿ ಹೋಮ್ ವರ್ಕ್ ಮಾಡುವುದು ಬೇಜಾರು ಕೆಲಸ ಎಂದನ್ನಿಸುತ್ತಿರುವುದಾಗಿ ಅಸತ್ಯಾನ್ವೇಷಿ ವರದಿ ಮಾಡಿದ್ದಾರೆ. ಪ್ರತಿಭಾವಂತರು ಕೂಡ ಹೊಸ ರುಚಿಯತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ತನ್ಮಧ್ಯೆ, ಈ ಹೊಸ ಶಿಕ್ಷಣ ನೀತಿಯನ್ನು ಭಾರತದಲ್ಲೂ ಜಾರಿಗೆ ತರಲು ಹಿಂದುಳಿದ ಸಂಪನ್ಮೂಲ ಸಚಿವ ದುರ್ಜನ್ ಸಿಂಗ್ ನೇತೃತ್ವದಲ್ಲಿ ಜಾತಿ ರಾಜಕಾರಣದ ಪ್ರತಿಪಾದಕರು ಮತ್ತು ಜಾತ್ಯಾಧಾರಿತ ದೇಶ ವಿಭಾಜಕ ರಾಜಕಾರಣಿಗಳು ತೀವ್ರವಾಗಿ ಆಲೋಚಿಸುತ್ತಿದ್ದಾರೆ. ಪ್ರತಿಭಾವಂತರು ಕೂಡ ಹೋಮ್ ವರ್ಕ್ ಮಾಡುವುದನ್ನು ನಿಲ್ಲಿಸುವುದರಿಂದ ದೇಶದಲ್ಲಿ ಪ್ರತಿಭಾವಂತರ ಕೊರತೆ ಕಾಣತೊಡಗುತ್ತದೆ. ಆ ಮೇಲೆ ಮೀಸಲಾತಿ ಜಾರಿಗೊಳಿಸುವುದು ಸುಲಭವಾದೀತು ಎಂಬುದು ಅವರ ಲೆಕ್ಕಾಚಾರವಾಗಿದೆ ಎಂದು ತಿಳಿದುಬಂದಿದೆ.
13 ಕಾಮೆಂಟ್‌ಗಳು
ಇದು ಮೋಸ ಇದು ಅನ್ಯಾಯ ರೀ..
ಪ್ರತ್ಯುತ್ತರಅಳಿಸಿಹೋಂ ವರ್ಕ್ ಮಾಡದಿದ್ರೆ ಅಷ್ಟೆನಾ ಈ ಶಿಕ್ಷೆ?
ನನ್ನ ಪ್ರಕಾರ ಇದನ್ನು ಅಫೀಸ್‍ನಲ್ಲಿ ಸಹ ಅಳವಡಿಸಬೇಕು..
ಕೆಲಸ ಮಾಡದೆ ಇರುವವರಿಗೂ ಈ ಸವಲತ್ತು..ಅಲ್ಲ..ಶಿಕ್ಷೆ ನೀಡಬೇಕು ಎಂದು ನಾನು ಅಗ್ರಹಿಸುತ್ತೇನೆ!
ನಿಮಗಾದ ಅನ್ಯಾಯಕ್ಕೆ ನಮ್ಮ ಕರುಳು ಕಿತ್ತು ಬರುತ್ತಿದೆ.
ಪ್ರತ್ಯುತ್ತರಅಳಿಸಿಹೆಚ್ಚಿನ(ಮುಂದುವರಿದ-ಅತ್ಯಾಧುನಿಕ!) ಶಿಕ್ಷೆ ವಿಧಿಸಲು ಶಿಫಾರಸು ಮಾಡಲಾಗುತ್ತದೆ.
ಆದ್ರೆ ಆಫೀಸಿನಲ್ಲಿ ಕೆಲಸ ಮಾಡದಿರುವವರಿಗೆ ಪ್ರತಿದಿನ ಮನೆಗೆ ಹೋಗುವ (ಮರು ದಿನ ವಾಪಸ್ ಬರುವ) ಸವಲತ್ತು ವಿಧಿಸಲಾಗುತ್ತದೆ ಅಂತ ಆಶಾಭಾವನೆ.
ಅದ್ಯಾಕೆ ನಿಮ್ಮ ಕರುಳು ಕಿತ್ತು ಬರುತ್ತಿದೆ. ಅವರು ಶಿವಶಂಕರ - ನರಸಿಂಹ ಅಲ್ಲ!
ಪ್ರತ್ಯುತ್ತರಅಳಿಸಿನೀವು ವರದಿ ಮಾಡಿರುವ ಬ್ಲೂ ಫಿಲ್ಮ್ ಎಂದರೇನು? ಚಿತ್ರ ಪೂರ್ಣವಾಗಿ ನೀಲಿ ಬಣ್ಣ ಇರುತ್ತದಾ? ವರ್ಣಚಿತ್ರ ಅಲ್ಲವಾ? ಮತ್ತೆ ಈ ಚಿತ್ರವನ್ನು ಎಲ್ಲಿ ತೋರಿಸುತ್ತಾರೆ? ಮೀಸಲಾತಿಯನ್ನು ಇಲ್ಲಿ ಏಕೆ ತರುತ್ತಿಲ್ಲ. ಹಾಗೆ ತಂದರೆ ಶೇಕಡಾ ಎಷ್ಟು ಮೀಸಲಾತಿ ತರಬೇಕು? ಚಿತ್ರ ನೋಡಲು ಹಣ ಕೊಡಬೇಕಾ? ಇತ್ಯಾದಿ ಮಾಡಾಲಿಟಿ ವರದಿ ಮಾಡಿದ್ದರೆ ಒಳ್ಳೆಯದಿತ್ತು.
ಕಛೇರಿಗಳಲ್ಲಿಯೂ ಇದನ್ನು ಜಾರಿ ತರುವಂತಿದ್ದರೆ, ಕೆಲಸವನ್ನೂ ಮಾಡದೇ, ಚಿತ್ರವನ್ನೂ ನೋಡಬಯಸದವರಿಗೆ ಏನಾದರೂ ಹೆಚ್ಚಿನ ಸವಲತ್ತು ಕೊಡಲಾದೀತೇ?
ಮಾವಿನರಸಾಯನ ಅವರೆ,
ಪ್ರತ್ಯುತ್ತರಅಳಿಸಿನೀಲಮೇಘ ಶ್ಯಾಮನ ಅವಾಂತರಕ್ಕಾಗಿ ಅವುಗಳನ್ನು ನೀಲ ವರ್ಣದ ಚಿತ್ರಗಳೆಂದು ಕರೆದಿರಬಹುದು.
ಕಚೇರಿಯಲ್ಲಿ ಈ ನೀತಿ ಜಾರಿಗೆ ಬಂದರೆ.... ಶಿಕ್ಷೆ ಇಷ್ಟವಿಲ್ಲದವರಿಗೆ ನಗದೀಕರಿಸಲು ಅವಕಾಶವಿದೆ. ಹಾಗಿದ್ದರೆ ನಿಮ್ಮ ವರಮಾನ (ವರ+ಮಾನ) ಹೆಚ್ಚಾಗಬಹುದೇ?
ಬ್ಲೂ ಫಿಲಂ ನೋಡಲೂ ಮೀಸಲಾತಿ? ಖಂಡಿತ ಬೇಕು. ಅಂದರೆ ಪರದೆಯ 15% ಭಾಗವನ್ನು ಎಸ್‌ಸಿಗಳು, 7% ಭಾಗವನ್ನು ಎಸ್‌ಟಿಗಳು, 27% ಭಾಗವನ್ನು ಒಬಿಸಿಗಳು ... ನೋಡಬೇಕು ಎಂದು ಕಾನೂನು ಮಾಡಲಾಗುವುದು. ಪರದೆಯ ಯಾವ ಭಾಗವನ್ನು ಯಾರು ನೋಡಬೇಕು ಎಂದು ತೀರ್ಮಾನಿಸಲು ಒಂದು ಸಮಿತಿ ರಚಿಸಲಾಗುವುದು. ಮೇಲ್ವರ್ಗದವರು ಇಲ್ಲೂ ಕಿತಾಪತಿ ಮಾಡಿ ಮುಖ್ಯವಾದ ಭಾಗವನ್ನು ಅವರು ನೋಡುವಂತೆ ಏರ್ಪಾಡು ಮಾಡಿಕೊಳ್ಳದಂತೆ ನೋಡಿಕೊಳ್ಳಲೂ ಇದೇ ಸಮಿತಿಗೆ ತಾಕೀತು ಮಾಡಲಾಗುವುದು.
ಪ್ರತ್ಯುತ್ತರಅಳಿಸಿ-ಪಬ್
ಪಬ್‌ನಲ್ಲಿ ಕುಳಿತು ಕಾಮೆಂಟಿಸಿದ ಅನಾನಿಮಸರೇ,
ಪ್ರತ್ಯುತ್ತರಅಳಿಸಿನಿಮ್ಮ ಕಾಮೆಂಟ್ ತೀರಾ ಬ್ಲೂ ಆಗಿದೆ ಅಂತನ್ನಿಸುತ್ತಿದೆ.
ನಿಮ್ಮ ಸಮಿತಿಯನ್ನು ರಚನೆಯಾಗುವ ಮುನ್ನವೇ ಬರ್ಖಾಸ್ತು ಮಾಡಲಾಗಿದೆ.
ಆ ಶಾಲೆಯಲ್ಲಿ ಎಲ್ಲರೂ NCC ಗೆ ಸೇರಲು ಬಹಳ ಸ್ಪರ್ಧೆ ಮಾಡುತ್ತ ಇದ್ದಾರೆ ಅಂತ ಕೇಳಿ ಬಂತು.
ಪ್ರತ್ಯುತ್ತರಅಳಿಸಿಇದನ್ನು ಕೇಳಿ ನಮ್ಮ ಸಚಿವರಿಗೆ ಬಹಳ ಸಂತೋಷ ಆಗಿ ನಮ್ಮ ಯುವಕರು ಹೆಚ್ಚು ಹೆಚ್ಚು ಸೇರಬೇಕೆಂದು ಕರೆ ಕೊಟ್ಟರು, ನಂತರ ತಿಳಿಯಿತು NCC ಅಂದರೆ ನೀಲಿ ಚಲನ ಚಿತ್ರ(NCC).
ಚುಂ-ಬನವಾಸಿಗಳೆ,
ಪ್ರತ್ಯುತ್ತರಅಳಿಸಿನೀವು ಶಾಲೆಯಲ್ಲಿರುವಾಗ NCC ಕಮಾಂಡರ್ ಆಗಿದ್ದಿರಂತ ಕೇಳಿ ಬಲ್ಲೆ. ನಿಜವೇ?
ಸಕ್ಕತ್ ಐಡಿಯಾ!!
ಪ್ರತ್ಯುತ್ತರಅಳಿಸಿನಮ್ಮ ಭಾರತ ದೇಶದಲ್ಲಿ ಇಂತಹ (ಅ)ವ್ಯವಸ್ಥೆ ಜಾರಿಗೆ ಬಂದರೆ ಶಿಕ್ಷಿಸುವುದಕ್ಕಾಗಿ ಬೇರೆ ಎಲ್ಲಿಂದಲೋ ನೀಲಿ ಚಿತ್ರಗಳನ್ನು ಹುಡುಕಿ ತರಬೇಕಾದ ಸಂದರ್ಭ ಬಾರದು.
ಏಕೆಂದರೆ, ಶಾಲೆಗೆ ಹೋಗುವ ಮಕ್ಕಳೇ ನೀಲಿ ಚಿತ್ರಗಳಲ್ಲಿ ನಟಿಸುವ ಮತ್ತು ಅವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಪರಿಣಿತಿ
ಹೊಂದಿದ್ದಾರೆ!!
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಓ ಅಲ್ಪಜ್ಞರೆ, ನಮಸ್ಕಾರ. ಚೆನ್.......ನಾಗಿದ್ದೀರಾ?
ಪ್ರತ್ಯುತ್ತರಅಳಿಸಿಛೆ, ನಮ್ ದೇಶದಲ್ಲಿ ಮಕ್ಕಳ ಚಿತ್ರಗಳಿಗೆ ಬರವಿದೆ ಅಂತ ಗೊತ್ತಿಲ್ಲವೆ? ಅದಕ್ಕಾಗಿ ಮೈಸೂರು ಮಲ್ಲಿಗೆ, ಮಂಗ್ಳೂರು ಮಲ್ಲಿಗೆ ಮುಂತಾದ ಪ್ರಶಸ್ತಿಗೆ ಆಯ್ಕೆಯಾಗಿರೋ ಚಿತ್ರಗಳ ಹೆಸರಿಟ್ಟು ಸುದ್ದಿ ಮಾಡುತ್ತಿದ್ದಾರೆ.
ಮಕ್ಕಳ ಚಿತ್ರಗಳಲ್ಲಿ ನಟನೆ ಅನುಭವವಿದೆಯೇ?
ಹುಷಾರು - ಸೆನ್ಸಾರ್ ಮಂಡಳಿಯವರು ನೋಡ್ತಿರ್ತಾರೆ. ಅದಲ್ಲದೇ ಬಾಲರ ಬಗ್ಗೆ ಬಾಲ ಬಿಚ್ಚೋದು ಅಕ್ಷಮ್ಯ ಅಪರಾಧ. ಅದ್ಸರಿ ಚೆನ್ನೈಲಿ ಇರೋ ಸೆನ್ಸಾರಿಗರಿಗೆ ಕನ್ನಡ ಬರುತ್ತದಾ?
ಪ್ರತ್ಯುತ್ತರಅಳಿಸಿಇಲ್ಲಿ ಬೆಂಗಳೂರಿಗರಿಗಿಂತ ಚೆನ್ನಾಗಿ ಕನ್ನಡ ಬರೋರಿದ್ದಾರೆ ಕಣ್ರೀ... ಹೀಗಾಗಿ ನಮ್ಗೂ ಭಯ ಹುಟ್ಟಿಸಿದ್ರಿ...
ಅಳಿಸಿಏನಾದ್ರೂ ಹೇಳ್ರಪಾ :-D