[ಬೊಗಳೂರು ಸೊಂಪಾದಕೀಯ ಬ್ಯುರೋದಿಂದ]
ಆತ್ಮೀಯ ಓದುಗರೇ,2006ರ ಏಪ್ರಿಲ್ 4ರ ಆ ಶುಭ ಮಂಗಳವಾರ, ಬೊಗಳೆ ರಗಳೆ ಬ್ಯುರೋ ಬಾಗಿಲು ತೆರೆದಾಗ ಭಾರತದಲ್ಲಿ ಚೆನ್ನೈಯಲ್ಲಿ ಸುನಾಮಿ ಎಂಬ ಪದ ಕೇಳಿದ್ದ ಜನರಿಗೆ, ಆಗ ಈ ಥರಹದ ಮತ್ತೊಂದು ಸುನಾಮಿ ಹುಟ್ಟಿಕೊಂಡಿದೆ ಎಂಬ ಪರಿವೆಯೇ ಇರಲಿಲ್ಲ. ಈಗಲೂ ಇಲ್ಲ! ಆ ಒಂದು ಸಾಲಿನ ವ-ರದ್ದಿಗೆ ಒಂದೇ ಒಂದು ಪ್ರತಿಕ್ರಿಯೆ ಬಾರದಿರುವುದೇ ಇದಕ್ಕೆ ಸಾಕ್ಷಿ.
ವಿಷಯಕ್ಕೆ ಬರೋಣ. ಜಗತ್ತಿನಾದ್ಯಂತವಿರುವ ಕೋಟಿ ಕೋಟಿ ಕನ್ನಡಿಗರಲ್ಲಿ, ಈ ಏಕ-ಸದಸ್ಯ ಬೊಗಳೆ ರಗಳೆ ಬ್ಯುರೋದಲ್ಲಿರುವ ಸಿಬ್ಬಂದಿಗಳಷ್ಟೇ ಅಪಾರವಾದ ಓದುಗರ ಸಂಖ್ಯೆಯನ್ನು ಹೊಂದಿರುವ ಈ ಅನಿಯತಕಾಲಿಕವು ನಾಲ್ಕು ವರ್ಷ ಪೂರೈಸಿದಾಗ ಅದು ಹೇಗೆ ಒಂದು ಲಕ್ಷ ಮಂದಿ ಒದೆ ಕೊಟ್ಟರೋ ನಾಕಾಣೆ. ಆದರೂ ಐದನೇ ವರ್ಷಕ್ಕೆ ಕಾಲಿರಿಸುತ್ತಿದೆ ನಮ್ ಬ್ಯುರೋ!
ಮತ್ತು ಇದು ನಮ್ಮ ಬ್ಯುರೋದ ಗಮನಕ್ಕೇ ಬಂದಿರಲಿಲ್ಲ. ಯಾಕೆಂದರೆ ಸ್ಟ್ಯಾಟ್‌ಕೌಂಟರ್ ತೋರಿಸುತ್ತಿದ್ದ ಹೆಚ್ಚಿನ ಸಂಖ್ಯೆ ಸೊನ್ನೆಯೇ ಆಗಿತ್ತು. ಕೊನೆಯಲ್ಲಿ 1 ಇತ್ತು ಎಂಬುದು ಗಮನಕ್ಕೆ ಬಂದಾಗ ಕಾಲ ಮೀರಿ ಹೋಗಿತ್ತು.
ಕಂಪ್ಯೂಟರ್ ಎಂದರೇನೆಂದು ಅರಿವಿಗೆ ಬರುವ ಮುನ್ನವೇ ಈ ಬ್ಲಾಗು ಎಂದರೇನೆಂದು ತಿಳಿಯದೆ, ಬರೀ ಬೊಗಳೆ ಇರಬಹುದು ಎಂದುಕೊಂಡೇ ಇದಕ್ಕೆ ಬೊಗಳೆ ರಗಳೆ ಎಂದೇ ನಾಮಕರಣ ಮಾಡಲಾಗಿತ್ತು. ಜಗತ್ತಿನಾದ್ಯಂತ ಇರುವ ಆಯಾ ಸರ್ವರ್‌ಗಳಿಂದ ಕಾರ್ಯಾಚರಿಸುತ್ತಿರುವ ಈ ನಮ್ಮ ಅಂತರ್ಜಾಲದ ಅಂತರ್ಪಿಶಾಚಿ ಪತ್ರಿಕೆಗೆ ಆರಂಭದಲ್ಲಿ ಇದ್ದದ್ದು ಒಬ್ಬರೇ ಸೊಂಪಾದಕರು, ಒಬ್ಬರೇ ವರದ್ದಿಗಾರರು, ಒಬ್ಬರೇ ಪ್ರಸರಣಧಿಕ್ಕಾರಿ ಮತ್ತು ಒಬ್ಬರೇ ಜಗಜ್ಜಾಹೀರಾತುದಾರರು ಹಾಗೂ ಒಬ್ಬ ಓದುಗ ಮಾತ್ರ. ಆ ಒಬ್ಬ ಓದುಗ ಯಾರೆಂಬ ಕುತೂಹಲವೇ? ಹೇಳುತ್ತೇವೆ ಕೇಳಿ, ಅದುವೇ ಈ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿಯಾಗಿರುವ ಸೊಂಪಾದಕರು! ತಾವು ಬರೆದಿದ್ದನ್ನು ಪ್ರತಿ ದಿನ ತಾವೇ ಓದುತ್ತಿದ್ದರವರು ಮತ್ತು ಓದಬೇಕಾಗಿ ಬರುತ್ತಿತ್ತು!
ಇಂಥದ್ದರಲ್ಲಿ, ಈಗಲೂ ನಮ್ಮ ಬ್ಯುರೋದ ಸಿಬ್ಬಂದಿಗಳ ಸಂಖ್ಯೆಯನ್ನು 1ಕ್ಕಿಂತ ಹೆಚ್ಚಿಸಿಲ್ಲ. ಅಂತೆಯೇ ಓದುಗರ ಸಂಖ್ಯೆಯೂ 1 ದಾಟಿದೆ. ಆದರೆ ಇದು ಒಂದು ಲಕ್ಷ ಎಂಬುದು ನಮ್ಮ ಲಕ್ಷ್ಯಕ್ಕೆ ಈಗ ಬಂದಿರುವುದರಿಂದ ಮತ್ತೊಮ್ಮೆ ನಿಮಗೆ ಧನ್ಯವಾದಗಳು. ಕೆಲವು ದಿನ ನಾಪತ್ತೆಯಾದರೂ ಬಂದು ಒದ್ದು ಹೋಗುವ ಅಂದರೆ ಓದಿ ಹೋಗುವ ನಿಮ್ಮ ತಾಳ್ಮೆಗೆ, ನಮ್ಮ ವರದ್ದಿಗಳನ್ನು ಓದಿ ಮತ್ತು ಓದದೆಯೂ ಅರ್ಥೈಸಿಕೊಳ್ಳುವ ಹಾಗೂ ಅಪಾರ್ಥೈಸಿಕೊಳ್ಳುವ, ನಮ್ಮ ವರದ್ದಿಯಲ್ಲಿರುವ ಟೊಳ್ಳನ್ನೇ ಬಾರ್ಕಿಂಗ್ ನ್ಯೂಸ್ ಎಂದು ಪರಿಗಣಿಸಿ ಓದಿ, ಒಂದಷ್ಟು ಆಣಿಮುತ್ತುಗಳನ್ನು ಉದುರಿಸಿ ಹೋಗುವ, ಈ ವರದ್ದಿಗಳನ್ನು ಓದಿಯೂ ಮತ್ತೊಮ್ಮೆ ಓದಲೆಂದು ಬರುವ ನಿಮಗೆಲ್ಲರಿಗೂ ಮತ್ತೊಮ್ಮೆ ಮೆಣಸ್‌ಕಾರಗಳು.
ಆದರೆ, ಈಗಲೂ ಕೂಡ ಬೊಗಳೆ ರಗಳೆ ಹುಟ್ಟಿಕೊಂಡಿದ್ದು ಏಪ್ರಿಲ್ 1ರಂದು ಎಂದೇ ವಾದಿಸುತ್ತಿದ್ದಾರೆ. ಬೊಗಳೆ ರಗಳೆ ಜನ್ಮ ದಿನ ಏಪ್ರಿಲ್ ಒಂದನೇ ತಾರೀಕೇ ಎಂಬುದು ಅವರ ಮನಸ್ಸಿನಲ್ಲಿ ಇಂದಿಗೂ ಕಾಡುತ್ತಿರುವ ಸಂಗತಿ ಮತ್ತು ಅವರ ವಾದವೂ ಹೌದು. ಹೀಗಾಗಿ, ಇದು ಖಂಡಿತವಾಗಿಯೂ ನಮ್ಮ ದಿನವಲ್ಲ ಎಂದು ಎಂದಿನಂತೆಯೇ ನಾವು ಸ್ಪಷ್ಟೀಕರಣ ನೀಡುತ್ತಿದ್ದೇವೆ.
ಈ ಒದೆಗಳನ್ನು ಕೊಟ್ಟ ಓದುಗರಿಗೆ (ಓದುಗ ಅಂದರೆ ಒದ್ದುಗ ಅಂದರೆ ಒದೆ ಕೊಡುವವ ಅಂತ ನಮ್ಮ ಡಿಕ್ಷನರಿ ಹೇಳುತ್ತದೆ!) ನಿಜಕ್ಕೂ ಕೋಟಿ ಕೋಟಿ ಪ್ರಣಾಮಗಳು ಮತ್ತು ಆನ್‌ಲೈನ್‌ನಲ್ಲೇ ದೊಡ್ಡ ಪಾರ್ಟಿಯನ್ನೂ ಈ ಮೂಲಕ ಇಟ್ಟುಕೊಂಡಿದ್ದೇವೆ. ಎಲ್ಲರೂ ಬಂದು ತಿಂದುಂಡುಹೋಗಬೇಕಾಗಿ ವಿನಂತಿಸುತ್ತಿದ್ದೇವೆ.
shubhashaya...
ReplyDeleteಅನ್ವೇಷಿಗಳೆ,
ReplyDeleteನಮ್ಮ ಪ್ರೀತಿಯ ಬೊಗಳೆ-ರಗಳೆಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ತಿಂದ ಲಕ್ಷ ಒದೆಗಳಲ್ಲಿ ನನ್ನವೂ ಸಾಕಷ್ಟಿವೆ ಎಂದು ಹೇಳಲು ಸಂತೋಷವಾಗುತ್ತದೆ. ಇದನ್ನೇ ಮುಂದುವರಿಸುತ್ತೇನೆ ಎಂದು ಹೇಳಲು ನನಗೆ ಯಾವ ಸಂಕೋಚವೂ ಇಲ್ಲ!
ಬೊಗಳೆ ರಗಳೆ ಬ್ಯೂರೊದ ಸೋ೦ಪಾದಕರಿಗೂ, ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬ೦ದಿ ವರ್ಗದವರಿಗೂ, ಲಕ್ಷಾನುಗಟ್ಟಲೆ ಅಭಿನ೦ದನೆಗಳು ಹಾಗೂ ಶುಭಾಶಯಗಳು.
ReplyDeleteಇನ್ನಷ್ಟು ವರದ್ದಿಗಳು ಬರುತ್ತಿರಲಿ.
ಮೆಣಸ್ಕಾರಗಳು.
ಅಸತ್ಯಾನ್ವೇಶಿಗಳೆ..
ReplyDeleteಅ೦ತೂ ಒ೦ದು ಇದ್ದದ್ದು ಒ೦ದೇ ಆಗಿ ಹೋಗಿದ್ದು [ ಉಳಿದದ್ದೆಲ್ಲಾ ಸೊನ್ನೆಗಳೆ೦ದು ನೀವೇ ಹೇಳಿದ್ದು]ನಮಗೆಲ್ಲಾ ಸ೦ತಸ ತ೦ದು ಮತ್ತಷ್ಟೂ ಮಗದಷ್ಟೂ ಒದ್ದಿದ್ದೇವೆ..
ಮತ್ತು ಆಗಾಗ ಹೀಗೆಯೆ ಬ೦ದು ಒದೆಸಿಕೊಳ್ಳುತ್ತಿರಿ ಮತ್ತು ಇನ್ನಷ್ಟು ಸೊನ್ನೆಗಳೇ ಸೇರಿಕೊಳ್ಳಲಿ..ಎ೦ದು ಹಾರೈಸುತ್ತೇನೆ.
ಶುಭಾಶಯಗಳು...:)
೫ ನೆ ಹುಟ್ಟು ಹಬ್ಬದ ಶುಭಾಶಯಗಳು ರೀ ........ಹೀಗೇನೆ ಕಾಲ ಕಾಲಕ್ಕೆ ಸರಿಯಾಗಿ ಒದೆಗಳು ಬೀಳ್ತಾ ಇರಲಿ ಅಂತ ಹಾರೈಸುತ್ತೇನೆ :)
ReplyDeleteಸುಶ್ರುತ ದೊಡ್ಡೋರೇ :) ಮೊದಲ ಶುಭಾಶಯಕ್ಕೆ ಧನ್ಯವಾದ.
ReplyDeleteಸುನಾಥರೇ,
ReplyDeleteನೀವು ಕೂಡ ಹುಟ್ಟುಹಬ್ಬದ್ದೇ ಶುಭಾಶಯ ಅಂತ ಒತ್ತಿ ಒತ್ತಿ ಹೇಳಿದ್ದಕ್ಕೆ ಕುಗ್ಗಿ ಹೋಗಿದ್ದೇವೆ, ಇದಕ್ಕಾಗಿ ನಿಮಗೆ ಮತ್ತೊಂದು ಧನ್ಯವಾದ.
ಮನಮುಕ್ತೋರೇ....
ReplyDeleteಲಕ್ಷಾನುಗಟ್ಟಲೆ ಹೇಳಿದ್ದಕ್ಕಿಂತ ಒಂದಾದ್ರೂ ಹೆಚ್ಚು ಶುಭಾಶಯ ಹೇಳ್ಬಹುದಿತ್ತು :). ತುಂಬಾ ಧನ್ಯವಾದ.
ಚುಕ್ಕಿಗಳಲ್ಲಿ ಚಿತ್ರ ಬಿಡಿಸುವವರೇ,
ReplyDeleteನಿಮ್ಮ ಸೊನ್ನೆಗಳ ಶುಭಾಶಯ ಅನಂತವಾಗಿಬಿಟ್ಟಿದೆ. ಒದೆಗಳೂ ಬಿದ್ದು ಬಿದ್ದು ಸುಸ್ತಾಗಿಬಿಟ್ಟಿವೆ... ಧನ್ಯವಾದ.
ಕೃತ್ತಿವಾಸಪ್ರಿಯರೇ, ಬೊಗಳೂರಿಗೆ ಸ್ವಾಗತ.
ReplyDeleteಶುಭ ಕೋರಿ ಊರಿಗೇ ಓಡಿಹೋಗಿದ್ದೀರಿ ಅಂತ ಗೊತ್ತಾಯ್ತು... ಅಷ್ಟೇನೂ ಬೊಗಳೆ ರಗಳೆಗೆ ಹೆದರಬೇಕಾಗಿರಲಿಲ್ಲ.... ಆದ್ರೂ ಧನ್ಯವಾದಗಳು.
ಇಂದು ನಿಮ್ಮದೇ ಹುಟ್ಟುಹಬ್ಬ ಅಂತ ಖಾತ್ರಿಯಾಗಿ ನಮ್ಮ ವದರಿಗಾರ ವದರಿದ್ದಾನೆ. ಅದೇನು ಕೊಡ್ತೀರೋ ಬೇಗ ಕೊಟ್ಬಿಡಿ. ತಿಂದು ಹರಸಿ ಹೋಗುವೆ
ReplyDeleteಒದೆಸಿಕೊಳ್ಳೊಕೆ ಅಂತಾ ನೀವಿರೋವಾಗ ಒದೆಯೋಕೆ ಏನು ಕಷ್ಟ ಸ್ವಾಮಿ !?. ಶುಭಾಷಯಗಳು.
ReplyDeleteಮಾನ್ಯ ಅನ್ವೇಷಿಗಳೇ, ಆನ್‌ಲೈನ್‌ನಲ್ಲೇ ಪಾರ್ಟಿ ಇಡ್ಕೊಂಡು, ಮುಕ್ತ ಆಹ್ವಾನ ನೀಡಿದ ನಿಮ್ಮ "ಉದಾರ ಮನಸ್ಸಿಗೆ" ಅನಂತ "ಒದೆಗಳು".!!!!! ಏನೇ ಇರಲಿ ಐದನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
ReplyDeleteತವಿಶ್ರೀಗಳೇ,
ReplyDeleteಸಾಕಷ್ಟು ವರ್ಷಾನುಗಟ್ಟಲೆ ದಶಕಗಳ ಕಾಲದ ಬಳಿಕ ದಯಮಾಡಿಸಿದ್ದೀರಿ... ನಮಗೆ ಪೂರ್ಣ ಕುಂಬು ಮರುಸ್ವಾಗತ.
ತಿನ್ನಲು ಅವಸರಿಸಬೇಡಿ. ಅದನ್ನು ಬಾಯಿಯಲ್ಲಿಟ್ಟುಕೊಂಡು ಚೂಯಿಂಗ್ ಗಮ್ಮಿನಂತೆ ತಿನ್ನಬೇಕು. ಅದುವರೆಗೂ ನೀವು ಇಲ್ಲೇ ತಿನ್ನುತ್ತಿರಬೇಕಾಗುತ್ತದೆ, ಹುಷಾರ್!
ಸುಬ್ರಹ್ಮಣ್ಯರೇ,
ReplyDeleteನಾವೂ ಒದೆಸಿಕೊಂಡು ಸುಸ್ತಾಗಿರುವಾಗ ಒದ್ದು ಓಡಲು ಅಡ್ಡಿಯಿಲ್ಲ ಎಂದು ಕೇಳಿ ಸಂತೋಷವಾಗಿದೆ.ನಿಮಗೆ ಕೃತಜ್ಞತೆಗಳು.
ನಿಶಿತಾ ಎಂಬ ಹಲವು ನಾಮಗಳಲ್ಲಿ ಬರೆಯುವವರಿಗೆ ಮಗದೊಮ್ಮೆ ಬೊಗಳೂರಿಗೆ ಸ್ವಾಗತ. ಮತ್ತೆ ನೀವು ಏನೇ ಹೇಳಿದರೂ ಹುಟ್ಟು ಹಬ್ಬದ ಪಾರ್ಟಿ ಕೇಳೋದನ್ನು ಬಿಡಲಾರಿರಿ ಅಂತ ಗೊತ್ತಾಗಿ ಪುನಃ ನಿದ್ದೆಗೆ ಜಾರಿದ್ದೇವೆ. ಕೃತಜ್ಞತೆಗಳು ನಿಮಗೆ.
ReplyDeleteಅನ್ವೇಷಿಯ ಅನ್ವೇಷಣೆಯ ಇನ್ನೂ ಹತ್ತಾರು ವರ್ಷ ಸಾವಿರಾರು ಪೋಸ್ಟ್ ಗಳೊಂದಿಗೆ ಶೋಭಿಸಲಿ....ಒದೆಸಿಕೊಳ್ಳೋದು...!!! ಹಹಹಹ ಎಂಥ ಮಾತು ಎಂಥ ಮಾತು,,,ಅನೇಷಿ ಹೇಳಿದೆ...?? ಹಹಹಹ
ReplyDeleteಜಲನಯನರವರೇ,
ReplyDeleteನಾವು ಕ್ರಿಸ್ತಪೂರ್ವದಿಂದಲೂ ಇದ್ದೆವು! ನಿಮ್ಮ ಅಭಿನಂದನೆಗೆ ಅಂದಿನಿಂದಲೂ ಪ್ರತ್ಯಭಿನಂದನೆಗಳು!
Post a Comment
ಏನಾದ್ರೂ ಹೇಳ್ರಪಾ :-D