ವ್ಯಾಕ್....ಡೊನಾಲ್ಡ್‌ದಿಂದ ಜನಸಂಖ್ಯಾ ನಿಯಂತ್ರಣ
Saturday, April 28, 2007
ಲೈಂಗಿಕ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಬೇಕೇ ಬೇಡವೇ ಎಂಬ ಕುರಿತು hot ಚರ್ಚೆ ನಡೆಯತೊಡಗಿರುವಂತೆಯೇ ದಿಢೀರನೇ ಎಚ್ಚೆತ್ತುಕೊಂಡಿರುವ ವ್ಯಾಕ್ ವ್ಯಾಕ್ಡೊನಾಲ್ಡ್, ಬಾಲಕಿಯರಿಗೆ ಆಹಾರದಲ್ಲಿ ಕಾಂಡೋಮ್ ವಿತರಿಸತೊಡಗಿರುವುದು ಹಲವರ ಹುಬ್ಬೇರಿಸತೊಡಗಿದೆ.
ತಮ್ಮ ಕಂಪನಿ ಆಹಾರ ಪದಾರ್ಥಗಳ ವಿರುದ್ಧ ತೀವ್ರ ಆಕ್ಷೇಪಗಳು ಕೇಳಿ ಬರುತ್ತಿವೆ. ನಾವು ಡಾಗ್ ಬಿಸ್ಕಿಟುಗಳನ್ನು ಮಾತ್ರವೇ ಮಾರಾಟ ಮಾಡುತ್ತೇವೆ ಎಂಬ ಕುರಿತು ಊಹಾಪೋಹಗಳು ಎದ್ದಿವೆ. ಮಾತ್ರವಲ್ಲದೆ ನಾವು ತಯಾರಿಸಿಕೊಡುವ ಹಾಟ್ ಡಾಗ್ ಕೂಡ ಬಿಸಿ ಬಿಸಿ ನಾಯಿ ಎಂಬರ್ಥದಲ್ಲಿ ಅಕ್ಷರಶಃ ತರ್ಜುಮೆಯಾಗಿ ಪ್ರಚಾರ ಪಡೆದುಕೊಳ್ಳುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ವ್ಯಾಕ್‌ಡೊನಾಲ್ಡ್ ತಿಳಿಸಿದೆ.
ದಯವಿಟ್ಟು ನಮ್ಮನ್ನು ನಂಬಿ. ಪ್ಲೀಸ್....ಪ್ಲೀಸ್... ನಾವು ಮನುಷ್ಯರು ತಿನ್ನುವಂತಹ ಪದಾರ್ಥಗಳನ್ನು ಮಾತ್ರವೇ ವಿತರಿಸುತ್ತೇವೆ. ಬೇಕಿದ್ದರೆ ಇದನ್ನು ನೀವು ಪರೀಕ್ಷಿಸಬಹುದು. ಒಂದು ತುಂಡು ಹಾಟ್ ಡಾಗನ್ನು ನಾಯಿಗೆ ಹಾಕಿ ನೋಡಿ, ಅದು ಸಾಯದಿದ್ದರೆ ಮತ್ತೆ ಕೇಳಿ ಎಂದಿರುವ ವ್ಯಾಕ್‌ಡೊನಾಲ್ಡ್, ಅದೇ ತುಂಡನ್ನು ಮನುಷ್ಯರು ತಿಂದರೆ ಏನೂ ಆಗುವುದಿಲ್ಲ. ಹಾಗಾಗಿ ನಮ್ಮದು ಮನುಷ್ಯರು ಮಾತ್ರವೇ ತಿನ್ನಬಹುದಾದ ಪದಾರ್ಥವಾಗಿರುತ್ತದೆ ಎಂದು ಸ್ಪಷ್ಟೀಕರಣ ನೀಡಿದೆ.
ನಾವು ನೀಡಿದ ಆಹಾರ ಸೇವಿಸಿ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತದೆ ಎಂಬ ಭೀತಿ ಇದ್ದರೆ ಅದರ ನಿವಾರಣೆಗಾಗಿ ಇಂಥ ಕಾಂಡೋಮ್ ವಿತರಣಾ ಕಾರ್ಯಕ್ಕೆ ಕೈಹಚ್ಚಿದ್ದೇವೆ ಎಂದು ತಿಳಿಸಿರುವ ಅದು, ಇದನ್ನು ಸದ್ಯಕ್ಕೆ ಸಣ್ಣ ಮಕ್ಕಳಿಗೆ ಮಾತ್ರವೇ ವಿತರಿಸಲಾಗುತ್ತದೆ. ಆ ಮೇಲೆ ದೊಡ್ಡ ಮಕ್ಕಳಿಗೂ ವಿತರಿಸುವ ಯೋಜನೆ ಇದೆ ಎಂದು ತಿಳಿಸಿದೆ. Read more...


